Tuesday 19 December 2017

‘ಕೊನೆ’ ಎಂಬ ಕೊನೆಯಿರದ ಪಯಣ

      ಮದಿರಾಲಯಗಳಲ್ಲಿ ಗಂಟೆಗಳವರೆಗೆ ಕುಳಿತು ಒಂದರ ಮೇಲೊಂದರಂತೆ ಪ್ಯಾಲಾಗಳನ್ನು ಖಾಲಿ ಮಾಡುವ ಕುಡಿತದ ಹಂಬಲ ಹಿಂಗುವುದು ಅದರ ಕೊನೆಯ ಹನಿಯಲ್ಲಿ. ಇದರಂತೆಯೇ ಕವಿತೆ, ಕವಿತೆಯಂತೆಯೇ ಕಾಮ, ಕಾಮದಂತೆಯೇ ಧ್ಯಾನ. ಯಾವುದೋ ಒಂದು ಮಹಾ ಘಟಿಸುವಿಕೆಯ ನಿರೀಕ್ಷೆಯ ಕೊನೆಯ ಹಂತವೇ ಅದರ ಕೊನೆಯ ಹನಿ ಅಥವಾ ಹನಿಗಳನ್ನು ದಾಖಲಿಸಿಕೊಂಡ ಒಂದು ಬರಹ.
     ‘ಕೊನೆಎನ್ನುವ ಪದದ ಮೋಹಕ್ಕೆ ಬಿದ್ದು ಪ್ರಕಟಗೊಂಡ ಸಮೃದ್ಧ ಸಾಹಿತ್ಯವನ್ನು ನಾನು ಗಮನಿಸಿದ್ದೇನೆ. ಸಾಕ್ರಟೀಸ್ಕೊನೆಯ ದಿನಗಳು, ‘ ಲಾಸ್ಟ್ ಲಕ್ಚರ್, ‘ಕಾಫರ್ ಕೊನೆಯ ಪತ್ರಗಳು, ಅಬ್ಬಾಸರಕೊನೆಯ ಪುಟ, ಗಾಂಧಿಯಅಂತಿಮ ದಿನಗಳು, ಮಾಂಟೋನಕೊನೆಯ ಪತ್ರಗಳುಹೀಗೆ ಸಾಲು ಸಾಲಾಗಿ ನಿಲ್ಲುವ ಪುಸ್ತಕಗಳು ಜೀವನ ದರ್ಶನದ ಮಹಾ ಬೆಳಕನ್ನು ತಮ್ಮೊಳಗೇ ಬಚ್ಚಿಟ್ಟುಕೊಂಡಿವೆ. ಸೃಜನಶೀಲತೆಯ ವಿಚಿತ್ರವೇ ಅದು. ನೀವು ಇಲ್ಲಿ ಯಾವಾಗಲೂ ಕಾಯಬೇಕಾದುದುಕೊನೆಎಂಬ ಕೊನೆಯವರೆಗೆ.
ಕಾಲಾತೀತವಾಗಿ ನೋಡಿದಾಗಲೂ ಕೊನೆಎಂಬ ರೋಚಕತೆ ಕಾಡಿದ ಬಗೆಗೆ ಅನೇಕ ಸಾಕ್ಷಿಗಳು ದೊರೆಯುತ್ತವೆ. ನೆಪೋಲಿಯನ್ಕೊನೆಯ ದಿನಗಳಬಗೆಗೆ ನಿಮಗದೆಷ್ಟು ಗೊತ್ತಿದೆಯೋ ನಾನರಿಯೆ. ಒಂದು ನಿಶ್ಚಿತ ಭೌಗೋಳಿಕ ಹಾಗೂ ಸಾಂಸ್ಕøತಿಕ ಪರಿಧಿಯೊಳಗೆ ಸಾಮಾಜಿಕ ಕ್ರಾಂತಿಯ ಮಹಾನ್ ಕನಸನ್ನು ಕಂಡ ಬಸವಣ್ಣನ ಕೊನೆಯ ಬಗೆಗೆ ಇದುವರೆಗೆ ನಮಗೇನೂ ದಕ್ಕಲೇ ಇಲ್ಲ. ಆದರೆ ವ್ಯಕ್ತಿಯೊಬ್ಬನ ಶಕ್ತಿಯ ಪರಾಕಾಷ್ಠತೆಯ ಪ್ರದರ್ಶನವಾಗುವುದು ಅವನಕೊನೆಯಲ್ಲಿಯೇ ಎನ್ನುವ ಹಿನ್ನೆಲೆಯಲ್ಲಿಯೇ ನಮ್ಮ ಶರಣರು ಹೇಳಿದರು, ‘ಶರಣರ ಮಹಿಮೆ ಮರಣದಲ್ಲಿ ನೋಡು.’ ಇಲ್ಲಿ ಮರಣ ಎನ್ನುವು ಬದುಕಿನ ಕೊನೆಯ ಪುಟ ಎನ್ನುವ ಸೂಚ್ಯಾರ್ಥ ಇದರಲ್ಲಿದೆ ಎಂದು ನಾನು ವಿವರಿಸಬೇಕಿಲ್ಲ.
        ಓದು ಎಷ್ಟೇ ವಿಸ್ತøತವಾಗಿದ್ದರೂ ಕೂಡ ನನ್ನನ್ನು ಕಾಡಿದ ಭಾರತೀಯ ಲೇಖಕರುಗಳು ಎಷ್ಟು ಜನ? ಎಂದು ಪ್ರಶ್ನಿಸಿಕೊಂಡರೆ ಬರುವ ಉತ್ತರ ಸಾವಿರದ ಲೆಕ್ಕದಲ್ಲೇನೂ ಇಲ್ಲ, ಬೆರಳೆಣಿಕೆಯಷ್ಟೆ. ಬೆರಳೆಣಿಕೆಯ ಬರಹಗಾರರಲ್ಲಿ ಸಾದತ್ ಹಸನ್ ಮಾಂಟೋ ಕೂಡ ಒಬ್ಬ. ಮಾಂಟೋನ ಕೊನೆಯ ದಿನಗಳು ಅತ್ಯಂತ ದಯನೀಯವಾಗಿದ್ದವು. ಕೊನೆಯ ದಿನಗಳನ್ನು ಒಂದಿಷ್ಟು ಜೈಲು, ಮತ್ತಷ್ಟು ಹುಚ್ಚಾಸ್ಪತ್ರೆ, ಇನ್ನಷ್ಟು ಬೀದಿ ಬೀದಿಗಳಲ್ಲಿ ಅಲೆದು ಆತ ಕಳೆದ. ಎಲ್ಲ ಹಿಂಸೆಯಿಂದ ಮುಕ್ತಗೊಳಿಸಲು ಆತನ ಕೊನೆಗಾಗಿ ಕಾಯ್ದವಳು ಆತನ ಹೆಂಡತಿ. ಮಾಂಟೋ ಇಲ್ಲದ ಅರೆಕ್ಷಣದ ಬದುಕೂ ಅಸಾಧ್ಯವಾಗಿದ್ದರೂ ಕೂಡ ಆತ ಒಮ್ಮೆ ಮರೆಯಾಗಿ ಬಿಡಲಿ ಎಂದೇ ಅವಳು ಪ್ರಾರ್ಥಿಸುತ್ತಿದ್ದಳು. ಯಾಕೆಂದರೆ ಮಾಂಟೋ ಮನುಷ್ಯರಿಗೆ ಅರ್ಥವಾಗುವ ಸಂದರ್ಭ ಅದಾಗಿರಲಿಲ್ಲ. ಮನುಷ್ಯತ್ವ ಮಾರಣಹೋಮವಾಗಿ ಮಾಂಟೋನಂಥ ಮನುಷ್ಯ ನಿಬ್ಬಾಗಿ ಕಾಣುವ ಭಾರತೀಯ ಸಾಮಾಜಿಕ ಮತ್ತು ರಾಜಕೀಯ ಸಂದರ್ಭವದು.
         ಆತ ಇಂಥ ಕೊನೆಯ ದಿನಗಳಲ್ಲೂ ಅಪರೂಪದ ಪತ್ರಗಳನ್ನು ಬರೆದಿದ್ದಾನೆ. ‘ಮಾಂಟೋ ಕಿ ಖತ್ನುಮಾಯೆಎನ್ನುವ ಸೊಗಸಾದ ಪುಸ್ತಕ ಒಂದು ಹಿಂದಿ ಭಾಷೆಯಲ್ಲಿದೆ. ಅದನ್ನೆತ್ತಿಕೊಂಡು ಏನೋ ಮಾಡಲು ಹೊರಟವ ನಾನು. ಮತ್ತೆ ಬದಿಗೆ ಸರಿಸಿದ್ದೇನೆ. ಯಾಕೆಂದರೆ, ಭಾರತ ಇನ್ನೂ ಆತನ ಬರಹದ ನಿರೀಕ್ಷೆಯ ಮನೋವಿಕಾಸವನ್ನು ಸಾಧಿಸಿಲ್ಲ ಎಂದೇ ನನ್ನ ವಾದ.
       ಈಗ ಪಾಶ್ಚಾತ್ಯ ಲೋಕದ ಜಾನ್ ಕೀಟ್ಸ್ ಎಂಬ ಎಳೆಯ ಗೆಳೆಯನ ಕೊನೆಯ ಪತ್ರಗಳನ್ನು ಹರಡಿಕೊಂಡು ನಿಮ್ಮೊಂದಿಗೆ ಸಂವಾದಕ್ಕಿಳಿದಿದ್ದೇನೆ. ಸಂದರ್ಭಕ್ಕೆ ಸಾಲುಗಳನ್ನು ಗೀಚಿಕೊಂಡು ಸಾಹಿತಿಗಳಾಗಿ, ಯೌವ್ವನದ ಹಂಗಾಮಿಗೆ ಮೈ ಹಾಸಿಕೊಂಡು ಪ್ರೇಮಿಗಳಾಗಿ, ಮುಪ್ಪು ಮುಪ್ಪರಿಗೊಂಡರೂ ಸಹಜವಾಗಿ ಸಿಗಬೇಕಾದ ಸಾವಿಗೂ ಭಿಕಾರಿಗಳಾದವರ ಮಧ್ಯ, ನೆಟ್ಟಗೆ ಯೌವ್ವನಕ್ಕೂ ಕಾಲಿಡದೇ, ಕೊನೆಯುಸಿರೆಳೆದ ಕವಿಯ ಕೊನೆಯ ಪತ್ರಗಳಿಂದ ನಾವೇನನ್ನೋ ಕಟ್ಟಿಕೊಳ್ಳಬೇಕಾದುದು ಇನ್ನೂ ಇದೆ ಎನ್ನುವ ನಂಬಿಕೆ ನನ್ನನ್ನು ಸಾಹಸಕ್ಕೆ ಪ್ರೇರೇಪಿಸಿದೆ.
Keats Lover Fanny Brown
     ಕೀಟ್ಸ್ ಅಸಲಿಯತ್ತೇ ಇದು. ಇನ್ನಾವುದೇ ಕವಿಯನ್ನು ಕುರಿತು ನೀವು ಹೀಗೆ ಆಲೋಚಿಸಲಾಗದು. ಕುಡಿತವನ್ನು ತೆಗೆದುಬಿಟ್ಟರೆ ಖಯ್ಯಾಮ ಹೇಗೆ ಖಾಲಿಯಾಗುತ್ತಾನೊ, ಸಂವಾದ ತೆಗೆದುಬಿಟ್ಟರೆ ಹೇಗೆ ಸಾಕ್ರಟೀಸ್ ಬರಿದಾಗುತ್ತಾನೊ, ಪ್ರೀತಿಯನ್ನು ತೆಗೆದುಬಿಟ್ಟರೆ ಮರಭೂಮಿಯಾಗಿಬಿಡುತ್ತಾನೆ ಕೀಟ್ಸ್. ಪ್ರೀತಿ, ಅದು ನೀಡಿದ ಯಾತನೆಯೇ ಆತನ ಕಾವ್ಯದ ಸಮಗ್ರ ಅಸ್ತಿವಾರ. ಪ್ರೀತಿಯಿಂದ ಭಾರವಾದ ಅವನ ಕಾವ್ಯ, ಕಾವ್ಯಾಭಿವ್ಯಕ್ತಿಯಿಂದಲೇ ತುಂಬಿಹೋದ ಅವನ ಪ್ರೀತಿ ಪರಸ್ಪರ ಹೊರೆಯಲ್ಲ, ಬದಲಾಗಿ ಸಮರಸಗೊಂಡು ಹೊರಹೊಮ್ಮುವ ಸೌಂದರ್ಯ.
    ಇಂಗ್ಲೀಷ್ ಕಾವ್ಯದ, ಎರಡನೇ ತಲೆಮಾರಿನ ಮೂರು ದುರಂತ ಬದುಕುಗಳಿಗೆ ಮೂರು ಹೆಸರು - ಜಾನ್ಕೀಟ್ಸ್, ಶೆಲ್ಲಿ ಮತ್ತು ಲಾರ್ಡ್ಬೈರನ್. 22ನೇ ವಯಸ್ಸಿಗೆ ಕೀಟ್ಸ್ ಮರೆಯಾದ, 26ನೇ ವಯಸ್ಸಿಗೆ ಶೆಲ್ಲಿ ಗತಿಸಿದ, 31ಕ್ಕೆ ಲಾರ್ಡಬೈರನ್ ಇನ್ನಿಲ್ಲವಾದ. ಗೊತ್ತಿರಲಿ, ಸಾವು ಇವರನ್ನು ಸಾಯದ ಇತಿಹಾಸವಾಗಿಸಲಿಲ್ಲ, ಬದಲಾಗಿ ಸಾಹಿತ್ಯದಲ್ಲಿ ತೋರಿದ ಪ್ರೌಢಿಮೆ ಅವರನ್ನು ಇತಿಹಾಸವಾಗಿಸಿತು.
     ತನ್ನ ಸಮಾಧಿಯ ಮೆಲೆನೀರ ಅಲೆಗಳ ಮೇಲೆ ಬರೆದ ಹೆಸರು ನನ್ನದುಎಂದು ಎಫಿಟಫ್ನ್ನು ಬರೆಸಿಕೊಂಡ ಕವಿ ಜಾನ್ಕೀಟ್ಸ್ನಿಗೆ ತನ್ನ ಅವಸಾನದ ನಂತರ ಪ್ರಪಂಚ ತನ್ನನ್ನು ಸ್ಮರಿಸಿಕೊಳ್ಳುವಂತದ್ದೇನಾದರೂ ತಾನು ಸಾಧಸಿದ್ದೇನೆ ಎನ್ನುವ ಭರವಸೆ ಇರಲಿಲ್ಲ. ಹೀಗಾಗಿ ಗೆಳೆಯ ಶೆಲ್ಲಿ ಅವನನ್ನುಪೂರ್ ಕೀಟ್ಸ್ಎಂದೇ ಸಂಬೋಧಿಸುತ್ತಿದ್ದ. ಸಮಕಾಲೀನ ವಿಮರ್ಶಕರಿಂದಚಿಲ್ಲರೆ ಕವಿಎಂದೇ ಪರಿಗಣಿತನಾದ ಕೀಟ್ಸನಿಗೆ ಪ್ರೀತಿಯೊಂದೇ ಸ್ಪೂರ್ತಿಯಾಗಿತ್ತು. ಅಂತರ್ಮುಖಿಯಾಗಿ, ಶಾರೀರಿಕವಾಗಿ ಕೃಷವಾಗಿ, ಮಿತಭಾಷಿಯಾಗಿದ್ದ ಕೀಟ್ಸನನ್ನು ಸಮಕಾಲೀನ ವಿಮರ್ಶೆಯೇ ಕೊಂದು ಹಾಕಿತೆಂದು ನಂಬಿಕೆ. ಅದರಲ್ಲೂ ಅವನ ಕುರಿತುಕ್ವಾರ್ಟರ್ ಲೀಪತ್ರಿಕೆಯಲ್ಲಿ ಬಂದ ಬರಹಗಳಂತೂ ಕೀಟ್ಸನ ಕಾವ್ಯಪ್ರತಿಭೆಯನ್ನು ಅರಿತುಕೊಂಡ ಯಾರಿಂದಲೂ ಸಹಿಸಲಾಗುವುದಿಲ್ಲ.
       ಬರಹದಲ್ಲಷ್ಟೇ ಅಲ್ಲ, ಸಾಧ್ಯವಾಗಿದ್ದರೆ ಯುಧ್ಧದಲ್ಲಿಯೂ ಯಾವ ಸೈನಿಕರನ್ನೂ ಮೀರಿಸಬಲ್ಲ ಧೈರ್ಯ-ಸ್ಥೈರ್ಯಗಳಿಂದ ಕೂಡಿದ್ದ ಕೀಟ್ಸ್ ಹೀಗೇಕೆ ಅಪಾರ್ಥಕ್ಕೊಳಗಾದ ಎಂದು ಪ್ರಶ್ನಿಸುತ್ತಾನೆ ಲಾರ್ಡಹಾಟನ್.
ಆಕಾಶವೆಂಬ ಪಾತ್ರೆಯನ್ನು
ನನ್ನ ಕಣ್ಣುಗಳಿಂದಲೇ ಖಾಲಿಮಾಡುತ್ತೇನೆ,
ಜಗದ ಹಿಮಗಿರಿಗಳನ್ನೆಲ್ಲಾ
ನನ್ನೆದೆಯಲ್ಲಿ ಬಚ್ಚಿಡುತ್ತೇನೆ,
ಸೂರ್ಯ ರಶ್ಮಿಗಳನ್ನೆಲ್ಲಾ
ಬುದ್ಧಿಯ ಬುತ್ತಿಯಲ್ಲಿ ಹೊಚ್ಚಿಡುತ್ತೇನೆ,
ನನ್ನ ನಿಲುವಿನಲ್ಲಿ ದೇವ ಅಪೋಲೋನನ್ನೂ ಸೋಲಿಸುತ್ತೇನೆ.

ಎಂದು ಅತ್ಯಂತ ಎಳೆಯ ವಯಸ್ಸಿಲ್ಲಿಯೇ ಆತ್ಮಸ್ಥೈರ್ಯದ ಹಾಡು ಹೇಳಿದ ಹುಡುಗನನ್ನು ಆತನ ಸಮಕಾಲೀನ ವಿಮರ್ಶೆ ಅದೇಕೆ ಅಷ್ಟು ದುರ್ಬಲವಾಗಿ ಪರಿಗಣಿಸಿತೋ ಅದು ಈಗಲೂ ಯಕ್ಷಪ್ರಶ್ನೆ.
       ಜಾನ್ ಕೀಟ್ಸನ ಕಾವ್ಯಕೃಷಿ ಸಾಕ್ಷಿಯಾಗುವ ಭಾವದಾರಿದ್ರ್ಯಕ್ಕೆ, ಸಾಂಸ್ಕøತಿಕ ದಾರಿದ್ರ್ಯಕ್ಕೆ ಮತ್ತಾವ ಕವಿಯ ಬದುಕನ್ನೂ ಹೋಲಿಸಲಾಗದು. ಇಡೀ ಬದುಕನ್ನು, ಅದರ ಸೂಕ್ಷ್ಮಾತಿಸೂಕ್ಷ್ಮಗಳನ್ನು, ಬಣ್ಣ ಮತ್ತು ಶಬ್ಧ-ಸೌಂದರ್ಯವನ್ನೂ ಅಷ್ಟೆ ಕಲಾವಂತಿಕೆಯಿಂದ ದಾಖಲಿಸಬಲ್ಲವನಾಗಿದ್ದ ಕೀಟ್ಸನ ಕಾವ್ಯ ಅವನ ಸಾವಿನ ನಂತರದ ಕನಿಷ್ಟ 20 ವರ್ಷಗಳವರೆಗೂ ಬೆಳಕಿಗೆ ಬರಲೇ ಇಲ್ಲ. ಶೇಕ್ಸಪಿಯರ್, ಜಾನ್ಮಿಲ್ಟನ್, ವಡ್ರ್ಸವರ್ಥ ಮತ್ತು ಡೀಕ್ವೆನ್ಸಿಯರನ್ನು ಸೇರಿಸಿದರೆ ಸಿಗುವಷ್ಟು ಕಾವ್ಯದ ಸುಖ ಮತ್ತು ಶಕ್ತಿ ನಮಗೆ ಕೀಟ್ಸನೊಬ್ಬನ ಕಾವ್ಯದಿಂದಲೇ ಸಿಕ್ಕಿಬಿಡುತ್ತದೆ.
   ಬಾಳಬೇಕಾದ ಕವಿಯೊಬ್ಬನ ಬದುಕಿನಲ್ಲಿ ಇದಕ್ಕಿಂತಲೂ ದುರಂತದ ಪುಟ ಮತ್ತೊಂದಿರಲಿಕ್ಕಿಲ್ಲವೇನೋ. ಸದಾ ಸಾವನ್ನು ಟ್ಯೂಬರ್ಕ್ಲಾಸಸ್ ರೂಪದಲ್ಲಿ ಹೊತ್ತು ತಿರುಗುತ್ತಿದ್ದ ಜಾನ್ ಕೀಟ್ಸ್ ಪತ್ರ-ಸಂವಹನಕ್ಕೆ ಕೊಟ್ಟ ಮಹತ್ವವನ್ನು ಶಬ್ಧ-ಸಂವಹನಕ್ಕೆ ಕೊಡಲಿಲ್ಲ. ಯಾವ ಪ್ರಮಾಣದಲ್ಲಿ ಬರೆದನೋ ಕೀಟ್ಸ್, ಅದೇ ಪ್ರಮಾಣದಲ್ಲಿ ಭಾಷೆಯನ್ನು ಲೋಕವ್ಯವಹಾರಕ್ಕೆ ಬಳಸಲಿಲ್ಲ. ಶಬ್ಧಗಳೊಂದಿಗೆ ಒಂದು ಹಠವಿತ್ತು ಕೀಟ್ಸನಿಗೆ. ಆತ ಅವುಗಳೊಂದಿಗೆ ಕುಳಿತರೆ ಕಾವ್ಯ ಘಟಿಸಬೇಕು, ಪ್ರೀತಿ ಘಟಿಸಬೇಕು ಇಲ್ಲ ಸಾವು ಘಟಿಸಬೇಕು. ಕೀಟ್ಸನ ಪಾಲಿಗೆ ಸಾವು ಒಂದು ಶೂನ್ಯ, ಅದು ಖಾಲಿತನದಲ್ಲಿ ಹುಟ್ಟಿ ಖಾಲಿಯೆಡೆಗೆ ನಡೆಯುವ ಪ್ರವಾಸವಲ್ಲ. ಬದಲಾಗಿ ಆತನ ಇಂದ್ರಿಯಗಳನ್ನು ಚಿಂತನೆ ಮತ್ತು ಕಾವ್ಯಕೃಷಿಯನ್ನು ಸಂತೃಪ್ತಿಯಿಂದ ತುಂಬಿ ಬಿಡುವ ಶೂನ್ಯ.
      ಶೇಕ್ಸಪಿಯರ್ ಯಾರಿಗೆ ಅಪರಿಚಿತ ಹೇಳಿ? ಅವನ ನಾಟಕಗಳು ಮುಗಿದಾಗ ಇಡೀ ರಂಗಭೂಮಿ ರುದ್ರಭೂಮಿಯಾಗಿ ಪರಿವರ್ತನೆಯಾಗಿಬಿಡುತ್ತದೆ. ಶವದ ಮೆರವಣಿಗೆಯಾಗುತ್ತದೆ. ನಮ್ಮೊಳಗೊಂದು ಶೂನ್ಯ ಘಟಿಸುತ್ತದೆ. ಆದರೆ ಕೀಟ್ಸನಲ್ಲಿ ಘಟಿಸುವ ಶೂನ್ಯದ ಪರಿಕಲ್ಪನೆ ಶೇಕ್ಸಪಿಯರನ ನೆಲೆಯದ್ದಲ್ಲ. ಅದು ಶೂನ್ಯ ಸತ್ಯ, ಆದರೆ ಸಂಭ್ರಮದ ಪ್ರತಿಬಿಂಬ. ನಮ್ಮ ಅಲ್ಲಮನ ಆಲೋಚನೆಯ ಒಂದು ತುಂಡು.
         ಆದರೆ 20 ವರ್ಷದ ಹುಡುಗನ ಮಾಗುವಿಕೆಯನ್ನು ಅರ್ಥ ಮಾಡಿಕೊಳ್ಳುವವರು ಎಷ್ಟು ಜನರಿದ್ದರು? ಬಹುತೇಕ ಒಬ್ಬನೇ, ಆತನ ಹೆಸರು ಚಾಲ್ರ್ಸ್ ಬ್ರೌನ್.
ಬ್ರೌನ್ ಬಹುದೊಡ್ಡ ಸಾಧನೆ ಕೀಟ್ಸನೊಂದಿಗೆ ಬದುಕಿದ್ದು. ಸಾವಿನ ಹಾಸಿಗೆ ಮೇಲೆ ಒದ್ದಾಡುತ್ತ, ಸಾಯದ ಪತ್ರಗಳನ್ನು ತನ್ನ ಪ್ರೇಯಸಿಗೆ ಬರೆಯುತ್ತಿದ್ದ ಕೀಟ್ಸನಿಗೆ, ಬಹುತೇಕ ಬ್ರೌನ್ನಲ್ಲಿದ್ದ್ದ ತಾಯ್ತನದ ಅರಿವಿತ್ತೋ ಇಲ್ಲವೋ, ತಪ್ಪಿ ತನ್ನ ಪ್ರೇಯಸಿಯೇನಾದರೂ ಬ್ರೌನ್ನೊಂದಿಗೆ ಮಾತಾಡಿದರೂ ಸಿಡಿಮಿಡಿಗೊಳ್ಳತ್ತಿದ್ದ ಕೀಟ್ಸ್. ಅಂತಿಮವಾಗಿ ಕೀಟ್ಸ್ ಗತಿಸಿದಾಗ ಅವನ ನೂರಾರು ಪ್ರೇಮಪತ್ರಗಳಿಗೆ ಕೈಚೀಲವಾದದ್ದು ಇದೇ ಬ್ರೌನ್.
ಕೀಟ್ಸನ ಕುರಿತು, ಅವನ ದುರಂತ ಪ್ರೇಮವನ್ನು ಕುರಿತು, ಅಧಿಕೃತವಾಗಿ ಮಾತನಾಡುವ ಯೋಗ್ಯತೆ ಇದ್ದದ್ದು ಬ್ರೌನ್ನಿಗೆ ಮಾತ್ರ. ಆದರೆ ಈತ ಕೀಟ್ಸನ ಬದುಕನ್ನು ಬರೆಯಲಿಚ್ಚಿಸುವಾಗ ಬೆಂಬಲಿಸುವ ಪ್ರಕಾಶಕರಿರಲಿಲ್ಲ. ಕೀಟ್ಸನ ಬಗ್ಗೆ ಸಮರ್ಥವಾಗಿ ಬರೆಯಬಲ್ಲ ಲೇಖಕರನ್ನು ಪ್ರಕಾಶಕರು ಹುಡುಕುವಾಗ ಬ್ರೌನ್ ಇಂಗ್ಲೆಂಡಿನಲ್ಲಿರಲಿಲ್ಲ. 1840 ಸುಮಾರಿಗೆ ತನ್ನ ಮಗನೊಂದಿಗೆ ಇಂಗ್ಲೆಂಡನ್ನು ತೊರೆದು ಶಾಶ್ವತವಾಗಿ ನ್ಯೂಜಿಲೆಂಡಿಗೆ ಹೋದ ಬ್ರೌನ್ನೊಂದಿಗೆ ಕೀಟ್ಸನ ಬದುಕಿನ ಅದೆಷ್ಟೋ ಸತ್ಯಗಳು ಮರೆಯಾದವು. ಕಾರಣಕ್ಕಾಗಿಯೇ ಹೇಳಿದೆ, ಕೀಟ್ಸನಂಥ ದುರಂತದ ಕವಿ ಇನ್ನೊಬ್ಬನಿರಲಿಕ್ಕಿಲ್ಲವೆಂದು.
      ಜಾನ್ಕೀಟ್ಸ್ ಹ್ಯಾಮ್ಸ್ಟೆಡ್ನಲ್ಲಿ ತಾನು ಅನುರಕ್ತನಾಗಿದ್ದ, ತನ್ನ ಕಾವ್ಯಬದುಕಿನ ಸರ್ವಸ್ವವೂ ಆಗಿದ್ದ, ಪ್ರೇಯಸಿ ಫೆನ್ನಿಬ್ರೌನ್ಳನ್ನು ಕುರಿತು ಅವನು ಬರೆದ ಒಂದು ಪತ್ರ ಬ್ರೌನ್ ಹತ್ತಿರ ದೊರೆಯುತ್ತದೆ. ಅದರಲ್ಲಿ ಕೀಟ್ಸ್ ಬರೆಯುತ್ತಾನೆ, ‘ನಾನು ಅವಳನ್ನು ಪ್ರೀತಿಸಿದೆ ಎಂದು ನೀನು ತಿಳಿದುಕೊಳ್ಳುವುದಾದರೆ ನನ್ನನ್ನು ಗ್ರಹಿಸುವುದರಲ್ಲಿ ನೀನು ಸೋತಿರುವೆ ಎಂದೇ ಅರ್ಥ. ನಾನೆಂದೂ ಅವಳ ಪ್ರೀತಿಯಲ್ಲಿರಲಿಲ್ಲ. ಆದರೆ ಅವಳನ್ನು ನೋಡಿದ, ಕಳೆದ ಎರಡು ದಿನಗಳಿಂದ ಹೆಣ್ಣೊಂದರ ಧ್ವನಿ, ಆಕೃತಿ ನನ್ನನ್ನು ಭಯಾನಕವಾಗಿ ಭೇಟೆಯಾಡುತ್ತಿದೆ. ಗೊತ್ತಿರಲಿ, ನಾನು ಪ್ರೀತಿಯಲ್ಲಿ ಅನುರಕ್ತನಾಗಿಲ್ಲ. ಆದರೆ ಮೊಝಾರ್ಟನ್ ಸಂಗೀತದಂತೆ ಅವಳು ನನ್ನನ್ನು ಎಚ್ಚರವಾಗಿರಿಸಿದ್ದಾಳೆ, ನಿದ್ರೆಗೆಡಿಸಿದ್ದಾಳೆ, ನೆಲೆಯಿಲ್ಲದವನನ್ನಾಗಿಸಿದ್ದಾಳೆ. ಬದುಕಿಗಾಗಿ ನಾನು ನಿನ್ನ ಮೊರೆಹೋಗಬೇಕು, ಅವಸಾನಕ್ಕಾಗಿ ನಾನು ಅವಳನ್ನೇ ಆಶ್ರಯಿಸಬೇಕು.’
        ಪ್ರೀತಿಯೆಂದರೆ ಬದುಕಿನ ಪರಮೋಚ್ಚ ಸಂತೋಷದ ನಿರಾಕರಣೆ ಹಾಗೂ ಸ್ವಾತಂತ್ರ್ಯದ ಹರಣ, ಮಿಗಿಲಾಗಿ ಮಾಯಲಾಗದ ಗಾಯ ಎಂದು ಚೆನ್ನಾಗಿ ಗೊತ್ತಿತ್ತು ಕೀಟ್ಸನಿಗೆ. ಫೆನಿಬ್ರೌನ್ ಪಕ್ಕದ ಮನೆಯೊಳಗೆ ಟ್ಯುಬರ್ಕ್ಲಾಸಸ್ ರೋಗದಿಂದ ನರಳುತ್ತಾ, ತನ್ನ ಪ್ರೇಯಸಿ ಮನೆಯಿಂದ ಹೊರಹೋಗುವ, ಓಡಾಡುವ, ನಗುವ, ಚಟುವಟಿಕೆಗಳನ್ನು ಮಲಗಿದಲ್ಲೇ ಕಿಟಕಿಯಿಂದ ನೋಡುತ್ತಿದ್ದ ಕೀಟ್ಸನಿಗೆ ಅವಳ ಪ್ರತಿ ಹೆಜ್ಜೆಯೂ ಸಂಗೀತದೊಂದಿಗಿನ ಸಮಾಗಮವಾಗಿತ್ತು. ಅವಳನ್ನು ಪ್ರೀತಿಸುತ್ತಿದ್ದೇನೆ ಎನ್ನುವುದೇ ಆತನ ಪಾಲಿನ ದೊಡ್ಡ ಸಂಭ್ರಮವಾಗಿತ್ತು. ಆಕೆಗೆ ಬರೆದ ಪತ್ರವೊಂದರಲ್ಲಿ ಆತ ತಿಳಿಸುತ್ತಾನೆ, “ನನ್ನ ಪ್ರೀತಿಯೇ ಇದೀಗ ನೀನು ಹೊರಹೋಗುವುದನ್ನು ನನ್ನ ಮನೆಯ ಕಿಟಕಿಯಿಂದ ಸಂಭ್ರಮಿಸಿದ್ದೇನೆ, ಧೂಳಿನಂತೆ, ದೃಷ್ಠಿಯಂತೆ ಮತ್ತು ನಿನ್ನನ್ನು ಸೃಷ್ಠಿಸಿದ ದೇವರಂತೆ, ನಿನ್ನ ನಡಿಗೆಯಲ್ಲಿ ನಾನು ನಿನ್ನ ಹಿಂಬಾಲಿಸಿದ್ದೇನೆ. ನಿನ್ನ ನೋಡಿದ ಪ್ರತಿಕ್ಷಣವೂ ಅಪರಿಚಿತವೇ ಎನಿಸುತ್ತದೆ ನನಗೆ. ಇದುವರೆಗೂ ಪ್ರಪಂಚದಲ್ಲಿ ಯಾವ ತಪ್ಪೂ ಎಸಗದ ಜೀವವೊಂದರೊಂದಿಗೆ ನನ್ನ ಸಂಭಾಷಣೆ ನಡೆದಿದೆಎಂದು ಹೇಳುತ್ತಲೇ ತನ್ನ ಪ್ರೀತಿಗೆ ನಿಬಂದನೆಗಳನ್ನು ರವಾನಿಸುವ ಕೀಟ್ಸ ತನ್ನ ಕಾವ್ಯಕೃಷಿಯ ಪರಮೋಚ್ಛ ಬರಹಗಳಾದ ಲಾಮಿಯಾ, ಈವ್ ಆಫ್ ಸೇಂಟ್ ಆಗ್ನೆಸ್, ನೈಟಿಂಗೇಲ್, ಗ್ರೇಸಿಯನ್ ಅರ್ನ ಗಳಲ್ಲಿ ಅವಳನ್ನು ಸಂಭ್ರಮಿಸಿ ಬಿಡುತ್ತಾನೆ.
           ಪ್ರೀತಿ ಮತ್ತು ಕಾವ್ಯಗಳು ಕೀಟ್ಸನ ಬಹುದೊಡ್ಡ ವ್ಯಸನವಾಗಿದ್ದವು. ಮರುತ್ತರಕ್ಕೆ ಕಾಯದೆ ತನ್ನ ಪ್ರೇಯಸಿಗೆ ಪತ್ರಗಳನ್ನೇ ಬರೆಯುತ್ತಾ ಹೋದ ಕೀಟ್ಸ ಈಗ ನಮ್ಮ ಮಧ್ಯ ಉಳಿದಿರುವುದು ಆತನ ಕಾವ್ಯದಿಂದಲೊ? ಅಥವಾ ಪ್ರೇಮ ಪತ್ರಗಳಿಂದಲೊ? ಎಂದು ನೀವು ಕೇಳುವುದಾದರೆ ನಿಮಗೆ ಕೀಟ್ಸ ಅರ್ಥವಾಗಿಲ್ಲ ಎಂದೇ ಅರ್ಥ. ಕೀಟ್ಸ ಸಾಯುತ್ತಾನೆ, ಸಾವಿಗೂ ಕೆಲವೇ ಕ್ಷಣಗಳ ಮುಂಚೆ ಫೆನಿಬ್ರೌನ್ ಪತ್ರ ಬರುತ್ತದೆ. ಅದನ್ನೆಂದೂ ಬಿಚ್ಚಿ ನೋಡಲು ಇಷ್ಟಪಡದ ಕೀಟ್ಸ ಅದು ತನ್ನ ಸಮಾಧಿಯೊಳಗಿರಲಿ ಎಂದು ಹೇಳಿ ಕೊನೆಯುಸಿರೆಳೆಯುತ್ತಾನೆ. ಆದರೆ ಅದನ್ನು ಬಿಚ್ಚಿ ಓದಿದ ನಮ್ಮ-ನಿಮ್ಮಂಥ ವಿಮರ್ಶಕರು ಮಾತ್ರ ಬೆಚ್ಚಿ ಬೀಳುತ್ತೇವೆ. ಏಕೆಂದರೆ ಬ್ರೌನ್ ಕೀಟ್ಸನ ಕಾವ್ಯದೊಳಗಿನ, ಕಾವ್ಯದ ನಿರೀಕ್ಷೆಯ, ವಿಧೇಯ ಪ್ರೇಯಸಿಯಾಗಿರಲಿಲ್ಲ. ಹೀಗಾಗಿಯೇ ಆತನ ಅವಸಾನದ 17 ವರ್ಷಗಳವರೆಗೂ ಅವಳು ಜೀವಂತವಾಗಿರುತ್ತಾಳೆ. ತನ್ನ ಬದುಕನ್ನು ತನ್ನದೇ ಲೆಕ್ಕದಲ್ಲಿ ಕಳೆಯುತ್ತಾಳೆ.