Friday 19 July 2013

ಸಾಂಸ್ಕೃತಿಕ ರಾಜಕಾರಣ: ಹದ್ದು ಮೀರಿದ ಹಾದಿ (Culture Politics: An Out Law)



Kumaravyasa

“ಖಳರ ಖಂಡಿಸುವ ಮದ
ವ್ಯಾಕುಲರ ದಂಡಿಸುವಾ
ದರಿದ್ರರನೊಲಿದು ರಕ್ಷಿಸುವಾ
ಸುಮಾಯಾದಿಗಳ ಶಿಕ್ಷಿಸುವ
ಕುಲಯುತರ ಕೊಂಡಾಡುವಾ ರಿಪು
ಬಲದ ತಲೆ ಚೆಂಡಾಡುವಾ
ದುರ್ಬಲರನತಿ ಭಾಧಿಸಿಯಲೇ ಭೂಪಾಲ”
   
                                                                                     

-ಕುಮಾರವ್ಯಾಸ(Kumanara Vyasa)

          ಕುಮಾರವ್ಯಾಸನ ಈ ಸಾಲುಗಳು ಸುಸಂಸ್ಕೃತ ಕನ್ನಡಿಗನೊಬ್ಬನಿಗೆ ಅಪರಿಚಿತವಾದವುಗಳೇನೂ ಅಲ್ಲ. ಇವು ಅಪರಿಚಿತ ಎನ್ನುವುದಾದರೆ ಆತ ಕನ್ನಡಿಗನೇ ?.. ಆತನಿಗೆ ಕನ್ನಡ ಸಂಸ್ಕೃತಿಯ ವೈಶಾಲ್ಯ, ವಿಸ್ತಾರ ಮತ್ತು ವಿವೇಕಗಳ ಪ್ರಜ್ಞೆ ಇದೆಯೇ? ಎನ್ನುವಷ್ಟು ನಿಚ್ಚಳವಾಗಿ ಆತ ಈ ಸಾಲುಗಳನ್ನು ಹೊಸೆದಿದ್ದಾನೆ. ರಾಷ್ಟ್ರವನಾಳುವ ನಾಯಕನೊಬ್ಬನಿಗೆ ಇರಲೇಬೇಕಾದ ಪ್ರಜ್ಞೆಯ ಕುರಿತು, ಇಲ್ಲಿ ಚರ್ಚಿಸುತ್ತ ರಾಜಕೀಯಕ್ಕೊಂದು ನೀತಿ-ಸಂಹಿತೆಯನ್ನು ಆತ ಸೂಚಿಸುತ್ತಾನೆ. ನೀತಿ-ಸಂಹಿತೆ ಎನ್ನುವುದು `ನಿಯಂತ್ರಣ’ ಎಂಬುದು ಎಷ್ಟು ಸತ್ಯವೋ ಅದು `ಬದುಕು-ಬದುಕಗೊಡು’ ಎನ್ನುವ ಸಹಕಾರ ತತ್ವಕ್ಕೆ ಪೂರಕ ಎನ್ನುವುದು ಕೂಡ ಅಷ್ಟೇ ಸತ್ಯ. ಕಾಲಕಾಲಕ್ಕೆ ಮನುಷ್ಯ ನೀತಿಯನ್ನು ಕುರಿತು ಹೀಗೆ ಕವಿಗಳಿಂದ, ದಾರ್ಶನಿಕರಿಂದ, ರಾಜಕೀಯ ತತ್ವ ಚಿಂತಕರಿಂದ ಚರ್ಚೆಗಳು ನಡೆಯದೇ ಹೋದಲ್ಲಿ ಈ `ಸಂಸ್ಕೃತಿ’(Culture) ಎನ್ನುವುದು, ಶರಣರ ಮಾತುಗಳಲ್ಲಿ ಹೇಳಬೇಕೆಂದರೆ, `ಕಡಗೀಲಿಲ್ಲದ ಬಂಡಿ’ಯಾಗುತ್ತದೆ. ಕನ್ನಡ ಸಂಸ್ಕೃತಿಯ ಮೇರು ಪ್ರಜ್ಞಾಸ್ಥಿತಿ ಎಂದೇ ಪರಿಗಣಿಸಲ್ಪಟ್ಟ ಶರಣ ಸಾಹಿತ್ಯ ರಚನಾಕಾಲದ ಜೇಡರ ದಾಸಿಮಯ್ಯ(Jedara Dasimayya)ನ ವಚನದ ಈ ಒಳವ್ಯಾಪ್ತಿಯಲ್ಲಿ ಚರ್ಚೆಯಾಗಿರುವುದು ಕೂಡಾ ಇದೇ ವಿಚಾರ-
Jedara Dasimayya


“ಕಡಗೀಲಿಲ್ಲದ ಬಂಡಿ
ಹೊಡೆಗೆಡೆಯದೆ ಮಾಬುದೇ?
ಕಡಗೀಲು ಬಂಡಿಗಾಧಾರ
ಕಡುದರ್ಪವೇರಿದ ಒಡಲೆಂಬ ಬಂಡಿಗೆ 
ಶರಣರ ನುಡಿಗಡಣವೇ ಕಡಗೀಲು ಕಾಣಾ ರಾಮನಾಥ”

               



            ಮಾನವ ಇತಿಹಾಸದುದ್ದಕ್ಕೂ `ಸಂಸ್ಕೃತಿ’(Culture) ಎನ್ನುವುದು ಮಾನವನ ಬದುಕಿಗೆ ಬೇಕಾದುದೆಲ್ಲವನ್ನೂ ಹೊತ್ತುಕೊಂಡು ಹೋಗುತ್ತಿರುವ ಬಂಡಿ. ಇದಕ್ಕೆ ಏನೆಲ್ಲಾ ಆಧಾರಗಳು ಬೇಕು, ಪೂರಕ ಶಕ್ತಿಗಳು ಬೇಕು. ಹಾಗೆಯೇ ಪ್ರಾಮಾಣಿಕ ಮನಸ್ಸುಗಳೂ ಬೇಕು.
         
            ಒಂದಂತೂ ಸತ್ಯ. ನಾಗರಿಕತೆಯ, ಪ್ರಭುದ್ಧತೆಯ ಲಕ್ಷಣವಾಗಿಯೇ ಸಾಂಸ್ಕೃತಿಕ ಚಿಂತನೆ ಆರಂಭವಾಯಿತೆನ್ನುವುದು ಸರ್ವಾನುಮತದಿಂದ ಒಪ್ಪಿಕೊಂಡ ಆಲೋಚನೆ. ಹಾಗೆಯೇ `ಸಂಸ್ಕೃತಿ’(Culture)ಯ ಆಶಯ ಮತ್ತು ಆದೇಶಗಳಲ್ಲಿಯೇ ನಾಗರಿಕತೆಯ ಹೊಸ ಅರ್ಥ ಸಾಧ್ಯತೆಗಳು ಸಾಧ್ಯವಾಗುತ್ತವೆ ಎನ್ನುವುದೂ ನಾವು  ಗಮನಿಸಬೇಕಾದ ಅಂಶ.
ಮಾನವ ಇತಿಹಾಸದಷ್ಟೇ ದೀರ್ಘವೂ, ಸಂಕೀರ್ಣವೂ ಆದ `ಸಂಸ್ಕೃತಿ’(Culture) ಎಂಬ ಸಂವೇದನೆಯ ಪೂರ್ವಾಪರ ಏನೇ ಇರಲಿ, ಒಟ್ಟಾರೆ 19ನೇ ಶತಮಾನದ ಆದಿ ಭಾಗದಲ್ಲಿ ಮಾನವ ಮನಸ್ಸಿನ ಸಾಮರ್ಥ್ಯಕ್ಕೆ, ಕಾಳಜಿಗೆ, `ಸಂಸ್ಕೃತಿ’(Culture) ಎನ್ನುವ ಪದವನ್ನು ಬಳಸಲಾಯಿತು. 20 ನೇ ಶತಮಾನದಲ್ಲಿ ಈ `ಸಂಸ್ಕೃತಿ’(Culture) ಮಾನವ ಅಧ್ಯಯನದ ಮುಖ್ಯ ಅಂಶವಾಯಿತು. `ಸಂಸ್ಕೃತಿ’(Culture)ಯನ್ನು ಆನುವಂಶಿಕ ಎಂದುಕೊಳ್ಳಬಾರದೇ? ಎಂದುಕೊಳ್ಳಬೇಕೇ? ಇದು ಇನ್ನೂ ಇತ್ಯರ್ಥವಾಗದ ಜಗಳ. ಆದರೆ ಹಾಗಂದುಕೊಳ್ಳಬಾರದು ಎನ್ನುವ ವಾದವನ್ನು ಪ್ರಪಂಚದ ಬಹುಪಾಲು ಚಿಂತಕರು ಕೂಡಾ ಧಿಕ್ಕರಿಸುತ್ತಾ, ಕಾಲದ ಕ್ರಮಿಸುವಿಕೆಯಲ್ಲಿ ಮನುಷ್ಯ, ಅನೇಕ ಅನುಭವಗಳಿಂದ ಪ್ರಪಂಚದ ಭವಿಷ್ಯದ ಕಾಳಜಿಯೊಂದಿಗೆ, ರೂಪಿಸಿಕೊಳ್ಳುವ ಆಶಯಗಳನ್ನು ಮತ್ತು ಅದಕ್ಕೆ ಪೂರಕವಾದ ವರ್ತಮಾನದಲ್ಲಿಯ ಆತನ ಕ್ರಿಯೆಗಳನ್ನು `ಸಂಸ್ಕೃತಿ’(Culture) ಎಂದು ಒಪ್ಪಿಕೊಂಡಿದ್ದಾರೆ. ವ್ಯಕ್ತಿಯ ಧರ್ಮ, ನಂಬಿಕೆ, ಮೌಲ್ಯ, ರೀತಿ-ನೀತಿ, ಸಮಯಪ್ರಜ್ಞೆ, ಅನುಶಾಸನಗಳು, ಸಂಬಂಧಗಳು, ಪ್ರಪಂಚದ ಬಗೆಗಿನ ತಿಳುವಳಿಕೆ, ಭೌತಿಕ ವಸ್ತುಗಳ ಲಾಭಗಳೊಂದಿಗಿನ ಆತನ ಪ್ರಜ್ಞಾಪೂರ್ವಕ ವ್ಯವಹಾರ, ಸಾಮಾಜಿಕ ಸಂಬಂಧ, ಇವೆಲ್ಲವುಗಳನ್ನು `ಸಂಸ್ಕೃತಿ’ (Culture)ಒಳಗೊಂಡಿರುತ್ತದೆ. ಇದನ್ನೊಂದು ಮಾನವ ವರ್ತನೆಗಳ ಸಂಗ್ರಹಿತ ಸ್ವರೂಪ ಎಂದೂ ವ್ಯಾಖ್ಯಾನಿಸಿದವರಿದ್ದಾರೆ.“ Culture is communication, communication is culture”ಎಂದು ಕೆಲವರು ಹೇಳಿದರೆ, “ A culture is a way of life, of group of people”  ಎಂದು ಕೆಲವರು ಸರಳೀಕರಿಸಿದ್ದಾರೆ.
       
         ಒಬ್ಬ ಸಾಮಾನ್ಯ ಪ್ರಜೆಯೂ ಗಮನಿಸಬೇಕಾದ ಅಂಶವೆಂದರೆ ಹೀಗೆ.. .. `ಸಂಸ್ಕೃತಿ’(Culture)ಯನ್ನು ಕುರಿತು ಯಾರು ಏನನ್ನೇ ಹೇಳಿರಲಿ, ಅದಕ್ಕೊಂದು ಸಾಮೂಹಿಕ, ಸಾಮಾಜಿಕ ಮತ್ತು ಭವಿಷ್ಯದ ಜವಾಬ್ದಾರಿ ಇದೇ ಎನ್ನುವುದನ್ನು ಕಾಲ-ದೇಶ-ಜನಾಂಗ ಭೇಧವಿಲ್ಲದೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ವ್ಯಕ್ತಿಯೊಬ್ಬನನ್ನು `ಸುಸಂಸ್ಕ್ರತ’ ಎನ್ನುವಾಗ ಅಥವಾ ಆತನ ಸಾಂಸ್ಕೃತಿಕ ಹಿನ್ನೆಲೆ ಎಂಥದು ಎಂದು ಪ್ರಶ್ನಿಸಿಕೊಳ್ಳುವಾಗ ಈ ಮೇಲಿನ ಎಲ್ಲ ಆಲೋಚನೆಗಳೂ ಇಲ್ಲಿ ಪ್ರಸ್ತುತ.

          ಹುಟ್ಟಿದವರೆಲ್ಲರೂ ಸಾಂಸ್ಕೃತಿಕ ರಾಯಭಾರಿಗಳೇ? ಹಾಗೊಂದು ವೇಳೆ ಆದರೆ ಇಡೀ ಮಾನವ ಇತಿಹಾಸ ಎನ್ನುವುದು ಹೆಸರುಗಳ ಹೊಳೆಯಾಗುತ್ತದೆ. ಸಾಂಸ್ಕೃತಿಕ ಪ್ರತಿನಿಧಿತ್ವ ವ್ಯಕ್ತಿಯ ವಿಶಿಷ್ಟ ಸಾಧನೆಯ ಜೊತೆಗೆ, ಆತನ ಆ ಸಾಧನೆಯ ಸಾಮಾಜಿಕ ಪರಿಣಮಿಸುವಿಕೆಯನ್ನು ಅವಲಂಬಿಸಿರುತ್ತದೆ. ಕುಮಾರವ್ಯಾಸನ ಕನ್ನಡದೊಂದಿಗಿನ ಪದ-ಪ್ರಯೋಗಗಳನ್ನು ಕನ್ನಡ ಸಂಸ್ಕೃತಿಯ ಭಾಗವೆಂದುಕೊಳ್ಳಬಹುದು. ಆದರೆ ಪದಗಳ ಮೂಲಕವೇ ನಡೆದ ಮಾತೆಮಾದೇವಿಯ ವಚನಗಳ ತಿರಿಚುವಿಕೆಯನ್ನು `ಸಂಸ್ಕೃತಿ’((Culture) ಎನ್ನಲಾಗದು. ಆತ್ಮಸಾಕ್ಷಾತ್ಕಾರವಿಲ್ಲದ ಘಜನಿ-ಘೋರಿಯ ದಾಳಿಗಳಿಗೂ, ಅಶೋಕನ ಕಳಿಂಗ ಯುದ್ಧದ ಮಧ್ಯ ವ್ಯತ್ಯಾಸವಿಲ್ಲವೇ? ಇದೆ ಎನ್ನುವುದಾದರೆ ಅದು ಪರಿಣಮಿಸುವಿಕೆಯಲ್ಲಿ ಮಾತ್ರ.

        ಮನುಷ್ಯನ ಭಾವಶುದ್ಧಿ, ನಡೆ-ನುಡಿಯ ಮಧ್ಯದ ಸಮನ್ವಯತೆ, ನಾಡ-ನುಡಿಯೊಂದಿಗಿನ ನಡೆ ತಪ್ಪದ ಸ್ಪಂದನೆಗಳೆಲ್ಲವೂ ವ್ಯಕ್ತಿಯ ಸಾಂಸ್ಕೃತಿಕ ಪಾತಿನಿಧಿತ್ವಕ್ಕೆ ಕಾರಣವಾಗುತ್ತವೆ. ಈ ಕಾರಣಕ್ಕೆ ಅಶೋಕ `ದೇವನಾಂಪ್ರೀಯ’(Devanampriya Ashoka)ನಾಗುತ್ತಾನೆ. ಕುರುಕ್ಷೇತ್ರ ಯುದ್ಧವನ್ನು ಮಾಡಿಸಿಯೂ ಗೊಲ್ಲ ಕೃಷ್ಣ(Lord Krishna) ಕೃಪಾಳುವಾಗುತ್ತಾನೆ. ಲೋಹಿಯಾ ಚರ್ಚಿಸುತ್ತಾರೆ, `ಕೃಷ್ಣ ಬರೀ ವ್ಯಕ್ತಿಯಲ್ಲ ಆತನೆಂದರೆ `ಸಂಸ್ಕೃತಿ’(Krishna is not a God, but HE is Culture). ಅವರು ಬರೆಯುತ್ತಾರೆ, “ ಈ ಪಾತ್ರ ಭಾರತೀಯ ನಂಬಿಕೆ ಹಾಗೂ ಸಂವೇದನೆಯಲ್ಲಿ ಬೆರೆತುಹೋದ ಪ್ರಜ್ಞೆ, ಸಂಸ್ಕೃತಿಯನ್ನು ಸಂಕೇತಿಸುವ ವಿಶಿಷ್ಟ ಶಕ್ತಿಗಳಿಂದ ಕೂಡಿದ ಆಕರ್ಷಣೆ ಎನಿಸುತ್ತದೆ.


         ಈ ಕೃಷ್ಣ(Lord Krishna) ಸಮತೆಯ ಸಂಕೇತ. ಒಂದರ್ಥದಲ್ಲಿ ಕೃಷ್ಣನಿಗೆ ಮಾತ್ರ ಇಡೀ ಭಾರತದ ಸಾಂಸ್ಕೃತಿಕ ಪ್ರಾತಿನಿಧಿತ್ವ ಪ್ರಾಪ್ತವಾಗಿದೆ. ಈಗ ಕೃಷ್ಣನೆಂದರೆ ಭಾರತ, ಭಾರತ ಎಂದರೆ ಕೃಷ್ಣ-ಕರುಣಾಸಾಗರ, ಕೃಷ್ಣ ಕಥಾಸಾಗರ. ಆತನ ಸಮತೆಗೊಂದು ಉದಾಹರಣೆ-
ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಬಾಲಕ `ಪರೀಕ್ಷಿತ’ ಹತನಾದಾಗ ಆತನಿಗೆ ಮರುಜೀವ ನೀಡಲು, ಕೃಷ್ಣ ಮಾನವ ಸಮಾಜವೇ ಹೆಮ್ಮೆ ಪಡಬೇಕಾದ ಮನದಾಳದ ಈ ವಾಕ್ಯವನ್ನು ಉದ್ಧರಿಸುತ್ತಾನೆ, “ಕೌರವ-ಪಾಂಡವರ ಯುದ್ಧದ ಸಮಯದಲ್ಲಿ ಒಂದು ವೇಳೆ ನನ್ನ ಮನಸ್ಸಿನಲ್ಲಿ ಪಾಂಡವರ ಪ್ರತಿ ರಾಗವಿಲ್ಲದಾಗಿತ್ತು ಮತ್ತು ಕೌರವರ ಪ್ರತಿ ದ್ವೇಷವಿಲ್ಲದಾಗಿತ್ತು ಎಂದಲ್ಲಿ ನನ್ನ ಸಮತೆಯ ಪರೀಕ್ಷಾರ್ಥವಾಗಿ ಈ ಬಾಲಕ ಜೀವಂತನಾಗಲಿ” ಎಂದು. ಪರಿಣಾಮ ಪರೀಕ್ಷಿತ ಮರುಜೀವ ಪಡೆಯುತ್ತಾನೆ.  

           ಕನ್ನಡದ ಮಟ್ಟಿಗೆ ಪಂಪ, ಕುಮಾರವ್ಯಾಸ, ಬಸವಣ್ಣ(Basavanna), ಶರೀಫ(Sharifa), ಕುವೆಂಪು(Kuvempu), ಬೇಂದ್ರೆ(Bendre)... ಹೀಗೆ ಕಾಲಕಾಲಕ್ಕೆ ಕೆಲವರನ್ನು ಕನ್ನಡ ಸಂಸ್ಕ್ರತಿಯ ಸಾಂಸ್ಕೃತಿಕ ರಾಯಭಾರಿಯ ಉಚ್ಛ ನಿದರ್ಶನಗಳು ಎಂದು ಚರ್ಚಿಸುತ್ತಾ ಬಂದಿದ್ದೇವೆ. ಆದರೆ ಈ ಮಹನೀಯರನ್ನು ಅಥವಾ ಇವರ ಸಮಕಾಲಿನ ಯಾರನ್ನೂ ಸಾಂಸ್ಕೃತಿಕ ರಾಯಭಾರಿ ಎಂದು ಒಪ್ಪಿಕೊಳ್ಳುವ ನಮ್ಮ ಮನಸ್ಸು, ವರ್ತಮಾನಕ್ಕೆ ಬಂದಾಗ ಉಲ್ಟಾ ಹೊಡೆಯುತ್ತದೆ, ಗಲಿಬಿಲಿಗೊಳ್ಳುತ್ತದೆ, ಆಯ್ಕೆಗಾಗಿ ತಡಕಾಡುತ್ತದೆ, ಆಯ್ಕೆಗೊಂಡ ಕೆಲವನ್ನು ಸಂಶಯದಿಂದ ಕೈಬಿಡುತ್ತದೆ. ಕಾರಣ ಅಪ್ರಮಾಣಿಕತೆ, ಸೃಜನಶೀಲತೆಯ ಆಶಯದಲ್ಲಿ ಆಗಿರುವ ಕಲಬೆರಕೆ.

         ವ್ಯಕ್ತಿಯ ಸಾಂಸ್ಕೃತಿಕ ರಾಯಭಾರತನಕ್ಕೆ ಕೆಲವು ಕನಿಷ್ಟ ಪ್ರಜ್ಞೆಗಳು ಬೇಕಾಗುತ್ತವೆ. ಅದನ್ನು ಹೊರುವ ಸಾಹಿತಿ, ಕಲಾವಿದ, ಯಾರೇ ಆಗಿರಲಿ ಕೆಲವು ವಿಕೃತಿಗಳ ಕುರಿತು ಅಸಡ್ಡರಾಗಿರಬೇಕಾಗುತ್ತದೆ. ಬರಹವಿರಲಿ, ಬಣ್ಣವಿರಲಿ, ಎಲ್ಲಿಯವರೆಗೆ ಅಸುಂದರವಿದ್ದುದ್ದನ್ನು, ಅನೈತಿಕವಾದುದನ್ನು, ಅಕಲ್ಯಾಣವಾದುದನ್ನು ತನ್ನ ಮಡಿಲೊಳಗೆ ಸೇರಿಸಿಕೊಂಡಿರುತ್ತದೆಯೋ , ಅಲ್ಲಿಯವರೆಗೂ ಅದು ಕಲೆಯೂ ಆಗಲಾರದು, ಸಾಹಿತ್ಯವೂ ಆಗಲಾರದು, ಇನ್ನು ಸಂಸ್ಕ್ರತಿಯಾಗುವುದಂತೂ ದೂರದ ಮಾತು. ಹಾಗಿದ್ದರೆ, ಇಂತದ್ದಕ್ಕೆ ಆಸ್ಪದವಿಯುವ ಸಾಹಿತಿ, ಕಲಾವಿದ ಏನಾಗಬಲ್ಲ? ಎಂದು ಪ್ರಶ್ನಿಸಿಕೊಂಡರೆ ದೊರೆಯುವ ಉತ್ತರ `ಸಾಂಸ್ಕೃತಿಕ ರಾಜಕಾರಣಿ’. ಅಂದಹಾಗೆ ಈ `ರಾಜಕಾರಣಿ’ ಎಲ್ಲಿ, ಯಾವಾಗ, ಯಾರೊಂದಿಗೆ ಮಂಚ ಹಾಕಬಲ್ಲನೋ  ಅದು ಆತನ ವಿವೇಕದಿಂದ ಹೊರತಾದ ಮಾತು.
 
        `ರಾಜಕಾರಣ’(Politics)ವೆಂದರೇನು?  ಎನ್ನುವುದನ್ನು ಶತಮಾನಗಳಿಂದ ನಾವು ಗಮನಿಸಿಯಾಗಿದೆ. ಮಾರ್ಕ್ಸ್(Karl Marx) ರಾಜಕಾರಣದ ವ್ಯಭಿಚಾರವನ್ನು ಬಹಳ ಹಿಂದೆಯೇ ಲೇವಡಿ ಮಾಡಿದ. ಆತ ಹೇಳುತ್ತಾನೆ, “ Politics is the art of looking for trouble, finding it everywhere, diagnosing it incorrectly, and applying the wrong remedies.”ಎಂಥ ವಿಚಿತ್ರವಲ್ಲವೇ?

          ನಾಗರಿಕತೆಯ ದಿನಗಳಿಂದಲೂ ಇಂತಹ ರಾಜಕಾರಣ(Politics) ಮನುಷ್ಯ ಸಮಾಜದ ಎರಡನೆಯ ದೊಡ್ಡ ಉದ್ಯೋಗವಾಗಿದೆ. ಇನ್ನಿಲ್ಲದ ಅಸ್ತಿತ್ವದ ಭಯವನ್ನು ನಮ್ಮ ಮುಂದಿಟ್ಟಿದೆ. ಆದರೆ ಅದು ಎಂತಹ ಅಸ್ತಿತ್ವ? ಭವಿಷ್ಯದ ದರ್ಶನವಿಲ್ಲದ, ಕಾಲಾಂತರದಲ್ಲಿ `ಛೀ, ಥೂ’ ಎನ್ನುವ ಭಾಷೆಗೆ ಒಳಪಡುವ, ಆದಾಗ್ಯೂ ನಮ್ಮ ಸಧ್ಯದ ಇಡಿಯಾದ ಭೌತಿಕ ಮತ್ತು ಮಾನಸಿಕ ಅಸ್ತಿತ್ವಕ್ಕೆ ಮೆರಗು ಎನ್ನುವ ಭ್ರಮೆ ಹುಟ್ಟಿಸುವ, ಆದರೆ ಭವಿಷ್ಯದಲ್ಲಿ   ಭಯಕ್ಕೆ ತಳ್ಳುವ, ಧರ್ಮದ ದಾರಿಯಲ್ಲಿ ಉಳಿವಿನ ಯಾವ ಲಕ್ಷಣವೂ ಇಲ್ಲದ, ಅಸ್ತಿತ್ವದ ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದೆ. ತಿಳಿದವನು, ತಿಳಿಯದವನು; ಸಮೀಪದವನು, ದೂರದವನು; ವಿವೇಕಿಯೂ, ಅವಿವೇಕಿಯೂ; ಅಯ್ಯೋ! ನಾನಿದನ್ನು ಮಾಡದೆ ಹೋದರೆ ನಿರ್ನಾಮವಾಗಿಬಿಡುತ್ತೇನೆ, ಮುಂದೊಂದು ದಿನ ನಾನು ಸ್ಮರಿಸಿಕೊಳ್ಳದೇ ಹೋಗುತ್ತೇನೆ ಎನ್ನುವ ವಿಚಿತ್ರ, ವಿಕೃತ ಭಯವನ್ನು ಸೃಷ್ಟಿಸಿದೆ ಈ ರಾಜಕಾರಣ(Politics).

         ಪ್ಲೇಟೊ ಹೇಳಿದ,“ One of the penalties for refusing to participate in politics is that you end up, being governed by your inferiors”. ಪ್ಲೇಟೋನ ಈ ಮಾತನ್ನು ಮನುಷ್ಯನ ವಿವೇಕದ ದುರಂತಕ್ಕೆ ಹಿಡಿದ ಕನ್ನಡಿ ಎಂದು ಒಪ್ಪಿಕೊಳ್ಳುವುದಾದರೆ ರಾಜಕಾರಣವೆನ್ನುವುದು ಮತ್ತೇನು ಅಲ್ಲ, ಬದಲಾಗಿ ನಾನು ಕನಿಷ್ಟನೊಬ್ಬನ ಆಲೋಚನೆಗೆ  ಒಳಪಡದೇ ಇರುವುದು ಎಂದರ್ಥ. ಗಮನಿಸಬೇಕಾದುದು, ಇದರೊಳಗೆ ಆತ ಹೆಳುತ್ತಿರುವ ಅಥವಾ ಎತ್ತುತ್ತಿರುವ ಪೈಪೋಟಿಯ ಪ್ರಶ್ನೆ . ನಾನು ಅನ್ಯರ ಆಲೋಚನೆಗೆ ಒಳಪಡದೇ ಇರಬೇಕು, ಇಲ್ಲವೇ ನನ್ನದನ್ನು ಸಮರ್ಥವಾಗಿ ಸಾರಿ, ಸರ್ವರು ಒಪ್ಪಿಕೊಳ್ಳುವಂತೆ ಮಾಡಬೇಕು, ಇದು ರಾಜಕಾರಣ, ಇದುವೇ ರಾಜಕಾರಣ.

         
Swmi Vivekananda
 ಸಾಂಸ್ಕೃತಿಕ ವಿಕೃತಿಯನ್ನು ಕುರಿತು ಮಹತ್ವದ ಚರ್ಚೆಯೊಂದನ್ನು ಸ್ವಾಮಿ ವಿವೇಕಾನಂದರು(Swami Vivekanand) ಅಮೇರಿಕೆಯ ತಮ್ಮ ಭಾಷಣವೊಂದರಲ್ಲಿ ಪ್ರಸ್ತಾಪಿಸಿದ್ದಾರೆ. ಕೇವಲ ಕೆಲವು ಪದಗಳ ಮೂಲಕ ಜನಾಂಗವೊಂದರ ಆತ್ಮಸ್ಥೈರ್ಯವನ್ನು ಕುಂದಿಸುವ ಕ್ರಿಯೆ ಹೇಗೆ ನಡೆದಿದೆ ಎನ್ನುವುದನ್ನು ಅವರು ಚರ್ಚಿಸಿದ್ದಾರೆ. “ಅಮೇರಿಕಾದಲ್ಲಿ ಯಾವಾಗ ಸಂವಿಧಾನ ರಚಿಸಲ್ಪಟ್ಟಿತೋ ಆಗ ಯಾರಿಗೆ ಎಷ್ಟು ತೆರಿಗೆಯನ್ನು ವಿಧಿಸಬೇಕು ಎನ್ನುವ ಚರ್ಚೆ ಬಂದಾಗ ನಿಗ್ರೋ ಒಬ್ಬ 60% ಪ್ರತಿಶತ ಮನುಷ್ಯನಾಗಿದ್ದಾನೆ ಎನ್ನುವ ವಿಚಿತ್ರ ಹೇಳಿಕೆಯನ್ನು ನೀಡಲಾಯಿತು. ಇಲ್ಲ ಆತ ಕೇವಲ 50% ಮನುಷ್ಯನಾಗಿದ್ದಾನೆ ಎಂದು ಕೆಲವರ ವಾದವಾಗಿರಲಿಕ್ಕೂ ಸಾಧ್ಯ. ಬದುಕಿನ ಒಳಿತನ್ನೇ ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ನಿಗ್ರೋ ಒಬ್ಬ ಬಿಳಿಯರಿಗಿಂತಲೂ ಕೇವಲ ಅರ್ಧದಷ್ಟು ಸೌಕರ್ಯ ಹೊಂದಿದವನಾಗಿದ್ದಾನೆ. ಇನ್ನು ಮಾಲಿನ್ಯತೆಯಂಥ ದುರ್ದೈವದ ವಿಷಯ ಬಂದರೆ ಆತ ಬಿಳಿಯರಿಗಿಂತಲೂ ಎರಡು ಪಟ್ಟು ದುರ್ಭಾಗಿಯಾಗಿದ್ದಾನೆ. ಅರ್ಧದಷ್ಟು ನೀಗ್ರೋಗಳು ಅರೇ ಉತ್ಕøಷ್ಟ ಮನೆಗಳಲ್ಲಿ ವಾಸಿಸುತ್ತಾರೆ. ಬಿಳಿಯರ ಅರ್ಧದಷ್ಟು ಆರ್ಥಿಕ ಸಬಲತೆಯನ್ನು ಪಡೆದಿದ್ದಾರೆ. ಆದರೆ ಬದುಕಿನ ನಷ್ಟಗಳ ವಿಷಯಕ್ಕೆ ಬಂದರೆ ಆತ ಬಿಳಿಯರ ಎರಡು ಪಟ್ಟು ಹಿಂಸೆಯನ್ನು, ಅಸಹ್ಯವನ್ನು ಅನುಭವಿಸಿದ್ದಾನೆ. ಬಿಳಿಯರ ಎರಡು ಪಟ್ಟು ನಿರುದ್ಯೋಗದಿಂದ ಬಳಲುತ್ತಿದ್ದಾನೆ. ಕರಿಯರ ಎಳೆಯ ಮಕ್ಕಳ ಸಾವು ಬಿಳಿಯರ ಮಕ್ಕಳಿಗಿಂತಲೂ ಎರಡು ಪಟ್ಟು ಹೆಚ್ಚಾಗಿದೆ. ಬಿಳಿಯರ ಜನಸಂಖ್ಯೆಗಿಂತಲೂ ಎರಡು ಪಟ್ಟು ಹೆಚ್ಚಾದ ಜನ ನಿಗ್ರೋಗಳು ವಿಯೆಟ್ನಾಂ ದೇಶವೊಂದರಲ್ಲೇ ಸಾವನ್ನಪ್ಪುತ್ತಿದ್ದಾರೆ. ಇನ್ನು ಪಾಶ್ಚಾತ್ಯ ರಾಷ್ಟ್ರಗಳ ಬೇರೆ ಬೇರೆ ಭಾಗಗಳಲ್ಲಿ ಅವರ ಸಾವಿನ ಸಂಖ್ಯೆ ಅಚ್ಚರಿ ಹುಟ್ಟಿಸುವಂತಹುದಿದೆ. ಪ್ರಾಥಮಿಕ ಶಿಕ್ಷಣದ ಶಾಲೆಗಳಲ್ಲಿ ಒಂದು ಅಥವಾ ಮೂರು ವರ್ಷ ನಿಗ್ರೊ ಮಕ್ಕಳು ಬಿಳಿಯರಿಗಿಂತಲೂ ಸಾಮಾನ್ಯವಾಗಿ ಮೂರು ವರ್ಷ ಹಿಂದಿರುತ್ತವೆ. ಇನ್ನು ವಿದ್ಯಾರ್ಥಿಗಳಿಗಾಗಿ ಕೊಡಲಾಗುವ ಹಣದ ಪ್ರಶ್ನೆ ಬಂದಾಗಲೂ ಕೂಡಾ ತಾರತಮ್ಯ ತಪ್ಪಿದ್ದಲ್ಲ. ನೂರಕ್ಕೆ ಇಪ್ಪತ್ತು ಪ್ರತಿಶತ ನಿಗ್ರೋಗಳು ಮಾತ್ರ ಕಾಲೇಜಿನ ಮೆಟ್ಟಿಲುಗಳನ್ನು ಏರುವುದರಲ್ಲಿ ಯಶಸ್ವಿಯಾಗಿದ್ದಾರೆ. ಎಪ್ಪತ್ತೈದು  ಪ್ರತಿಶತ ನಿಗ್ರೋಗಳು ನೌಕರಿಗಳಲ್ಲಿ ಅತ್ಯಂತ ಕೆಳವರ್ಗದ ಸ್ಥಾನಗಳಲ್ಲಿ ಇದ್ದಾರೆ.

              ಸಂಸ್ಕೃತಿ(Culture)ಗೆ ತಾವೇ ಮೇರು ಉದಾಹರಣೆ ಎಂದುಕೊಳ್ಳುವ ಅಮೇರಿಕಾದಲ್ಲಿ ಕಪ್ಪುದಾಗಿರುವುದೆಲ್ಲವೂ ಅಸಹ್ಯವಾಗಿರುತ್ತದೆ, ಮತ್ತು ಕಳಪೆ ಮಟ್ಟದ್ದಾಗಿರುತ್ತದೆ ಎನ್ನುವ ದುರಾಲೋಚನೆ ಸ್ಥಾಪನೆಯಾಗಿದೆ. Rosetts Thesaurus ನಲ್ಲಿಯೂ ಕೂಡಾ `ಕಪ್ಪು’ ಎನ್ನುವ ಪದಕ್ಕೆ ಸರಿಸುಮಾರು ಒಂದುನೂರಾ ಇಪ್ಪತ್ತು ಸಮಾನಾರ್ಥಗಳ ಪದಗಳನ್ನು ಸೂಚಿಸಲಾಗಿದ್ದು, ಅದರಲ್ಲಿ ಕನಿಷ್ಠ 60% ಪದಗಳು ಅಪರಾಧಿ ಮನೋಭಾವವನ್ನು ಬೆಳೆಸುವವೇ ಆಗಿವೆ. `ಕಪ್ಪು’ ಎಂದರೆ ಭೂತ, ದೆವ್ವ, ರಾಕ್ಷಸ, ಸೂತಕ, ಅಜ್ಞಾನ ಎನ್ನುವ ಅರ್ಥಗಳನ್ನೇ ತೋರಿಸಲಾಗಿದೆ. `ಬಿಳಿ’ ಎನ್ನುವುದಕ್ಕೆ ಸುಮಾರು ನೂರಾ ಮೂವತ್ನಾಲ್ಕು ಸಮಾನರ್ಥಕ ಪದಗಳನ್ನು ಸೂಚಿಸಲಾಗಿದ್ದು ಅವೆಲ್ಲವೂ ಮೂಲ ಪದವನ್ನು ಹೊಗಳಿಕೆಯ ಶಿಖರಕ್ಕೆ ಏರಿಸುವವೇ ಆಗಿವೆ. ಉದಾಹರಣೆಗೆ `ಬಿಳಿ’ ಎಂದರೆ ಪಾವಿತ್ರ್ಯತೆ, ಸ್ವಚ್ಛತೆ, ಚಾರಿತ್ರ್ಯ, ಮುಗ್ಧತೆ, ಬೆಳಕು, ಜ್ಞಾನ ಎಂದೂ ಅರ್ಥಗಳನ್ನು ಹೊರಡಿಸಲಾಗಿದೆ. `A white lie is better than a black lie’ ಗಳಂಥ ನುಡಿಗಟ್ಟುಗಳನ್ನು ಹುಟ್ಟು ಹಾಕಲಾಗಿದೆ. ಕುಟುಂಬದ ಅತ್ಯಂತ ಕೆಳಸ್ತರದ ಸದಸ್ಯನನ್ನು  “Black Sheep” ಎಂದು ಸಂಭೋದಿಸಲಾಗುತ್ತದೆ. ಅಂತೆಯೇOssaie Davis ಹೇಳುತ್ತಾನೆ – “ನಿಗ್ರೋ ಮಗುವಿಗೆ ಅರವತ್ತು ರೀತಿಯಲ್ಲಿ ತನ್ನ ಆತ್ಮಸ್ಥೈರ್ಯವನ್ನೇ ಕೊಂದುಕೊಳ್ಳಲು ಕಲಿಸುವ ಇಂಗ್ಲಿಷ್ ಭಾಷೆಯನ್ನು, ಮತ್ತು  ಅದನ್ನು ಕಲಿಸುವ ಇಂಗ್ಲಿಷ್ ಶಿಕ್ಷಕರನ್ನು ಇಂದು ಪುನರ್ ಪರಿಶೀಲಿಸಬೇಕಾಗಿದೆ. 134 ರೀತಿಯಿಂದ ತನ್ನನ್ನೇ ತಾನು ವೈಭವೀಕರಿಸಿಕೊಂಡು ಅಹಂನ್ನು ಬೆಳೆಸಿಕೊಳ್ಳಬಹುದಾದ ಬಿಳಿಯರ ಮಗುವನ್ನು, ಸದಾ ಕೀಳರಮೆಯಿಂದ ನರಳುವ ಕರಿಯರ ಮಗುವನ್ನು ನಮ್ಮ ಶಿಕ್ಷಣ ವ್ಯವಸ್ಥೆ ಸಮಾನವಾಗಿ ನೋಡುವ ಮೌಲ್ಯಗಳನ್ನು ನಾವಿಂದು ಪ್ರಚಾರ ಮಾಡಬೇಕಿದೆ.ಅಮೇರಿಕಾ ದೇಶಕ್ಕೆ ಮತ್ತು ಬದುಕಿಗೆ ನಿಗ್ರೋಗಳ ಇದುವರೆಗಿನ ಕೊಡುಗೆಯನ್ನು ನಿರ್ಲಕ್ಷಿಸುವುದು ಇತಿಹಾಸ ಕಾಲದಿಂದಲೂ ಸಾಮಾನ್ಯವಾಗಿದ್ದು ಮುಂಜಾನೆಯ ನಮ್ಮ ದಿನಪತ್ರಿಕೆಯಷ್ಟೆ ಸಾಮನ್ಯವಾದುದು ಮತ್ತು ನಿರಂತರವಾದುದು. ಇಂತಹ ಸಾಂಸ್ಕøತಿಕ ವಿಕೃತಿಯನ್ನು ಬುಡಮೇಲಾಗಿಸಬೇಕಾದರೆ ನಿಗ್ರೋ ಒಬ್ಬ ಮೂಲತಃ ತನ್ನ ಒಲಂಪಿಯನ್ ಶಕ್ತಿಯೊಂದಿಗೆ ನಿದ್ರೆಯಿಂದ ಎದ್ದೇಳಬೇಕಿದೆ.”

        ನಿಗ್ರೊಗಳನ್ನು ಮುಂದಿಟ್ಟುಕೊಂಡ ಸ್ವಾಮಿ ವಿವೇಕಾನಂದ(Swami Vivekanand)ರ ಈ ಭಾಷಣದ ಭಾಗದಲ್ಲಿ ಚರ್ಚೆಯಾಗಿರುವ ಅಂಶ ಮಾತೃ ಭಾಷೆಯ ಮೂಲಕ ನಡೆಯುವ ದಾಳಿ ಮತ್ತು ಆತ್ಮಸ್ಥೈರ್ಯ ಕುರಿತಾದ ಪ್ರಶ್ನೆ. ಇದರ ಒಳದೋಟಿಯಲ್ಲಿಯೇ ಕನ್ನಡದ ದಲಿತ-ದಲಿತೇತರ, ಉತ್ತರ-ದಕ್ಷಿಣದವರ, ಅವಕಾಶಿತರ-ಅವಕಾಶ ವಂಚಿತರ ಎಲ್ಲ ಸಮಸ್ಯೆಗಳಿಗೂ ನಾವು ಮುಖಾಮುಖಿಯಾಗಬಹುದಾಗಿದೆ. ಒಂದಂತೂ ಸತ್ಯ, ಸಮತೆ  ಅಮೇರಿಕಾದಲ್ಲಿಯಮ್ತೆ ಕನ್ನಡದ ನೆಲದಲ್ಲಿಯೂ ಕಳೆದುಹೋದ ಸಂಸ್ಕೃತಿ(Culture). ಗೊತ್ತಿರಲಿ, ಭಾಷೆ ಎನ್ನುವುದು ಸಂಸ್ಕೃತಿ(Culture)ಯ ಅವಿಭಾಜ್ಯ ಅಂಗ. ಯಾವುದನ್ನು ಸಂಸ್ಕೃತಿ(Culture) ಎನ್ನುವೆವೊ ಅದಕ್ಕೊಂದು ಸ್ವತಂತ್ರ ಭಾಷೆಯೂ ಬೇಕು. ಆದರೆ ಆ ಭಾಷೆ ಅಧಿಕಾರರೂಢರ ಅಥವಾ ಪ್ರಭುತ್ವವಾದಿಗಳ ಅಡಿಯಾಳಾದರೆ ಎಂಥ ಸಾಂಸ್ಕೃತಿಕ ರಾಜಕಾರಣಕ್ಕೆ ಕಾರಣವಾಗುತ್ತದೆ ಎನ್ನುವುದನ್ನೂ ವಿವೇಕಾನಂದರು ಸೂಚಿಸುತ್ತಿದ್ದಾರೆ. ಇದನ್ನೇ ಕನ್ನಡದ ಪಾಲಿಗೆ ಶರಣರು, ಕುವೆಂಪುನಂಥ ವೈಚಾರಿಕ ಪ್ರಜ್ಞೆಯ ಲೇಖಕರೂ ಅನೇಕ ಸಾರಿ ಕೇಳಿಕೊಂಡಿದ್ದಾರೆ. ಯೂರೋಪಿನಲ್ಲಿಯಂತೆ ಸಾಹಿತ್ಯದ ಹೆಸರಿನಲ್ಲಿ ಇಂಥ ಅಪದ್ಧ ಕನ್ನಡದಲ್ಲಿಯೂ ನಡೆದಿರುವುದು ಸರ್ವವಿಧಿತ.

       ಸ್ವಯಂ ಓರ್ವ ಶ್ರೇಷ್ಟ ಕವಿ, ಕಲಾವಿದ ಮತ್ತು ಲೋಕಸಂಚಾರಿಯಾಗಿದ್ದ ರವೀಂದ್ರನಾಥ್ ಠ್ಯಾಗೋರರು(Ravindranath
Rabindranath Tagore
Tagore) `ಸಂಸ್ಕ್ರತಿ’(Culture) ಎಂದರೆ ಯಾವುದು? ಕಲೆ(Art)ಯ ಪರಮೊಚ್ಛ ಗುರಿಯೇನು? ಯಾವುದನ್ನು ನಾಗರಿಕತೆ(Civilization) ಎನ್ನಬೇಕು? ಮತ್ತು ಧರ್ಮ(Religion) ಎಂದರೇನು? ಎನ್ನುವ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವುದರಲ್ಲಿ ನಿರಂತರವಾಗಿ ತೊಡಗಿಕೊಂಡಿರುವುದನ್ನು ಅವರ ಸೃಜನಶೀಲತೆಯುದ್ದಕ್ಕೂ ನಾವು ಗಮನಿಸಿದ್ದೇವೆ. `ಸಂಸ್ಕೃತಿ’(Culture) ಎಂದರೇನು? ಎಂದು ಪ್ರಶ್ನಿಸಿಕೊಳ್ಳುತ್ತಾ ಅವರು ಬರೆಯುತ್ತಾರೆ, “ ಸಂಸ್ಕ್ರತಿಯೇ ಧರ್ಮ(Culture is Religion). ಕಾಲದ ಕ್ರಮಿಸುವುಕೆಯಲ್ಲಿ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಾ, ಸಮಾಜಕ್ಕೆ ನೈತಿಕ ಶಕ್ತಿಯಾಗಿ ನಿಂತು, ಅದು ಪರಿಪೂರ್ಣವಾಗಿ ಬೆಳೆಯುವ ರೀತಿಯನ್ನು ಕಲಿಸುವಲ್ಲಿ ಮಾರ್ಗದರ್ಶಿಯಾದುದೇ `ಸಂಸ್ಕ್ರತಿ’(Culture). ಯಾವುದು ನಮ್ಮೆಲ್ಲರನ್ನು ಅವಿಚ್ಛಿನ್ನವಾಗಿರಿಸುವುದರೊಂದಿಗೆ ಸುಖಿ ಸಾಮ್ರಾಜ್ಯದೆಡೆಗೆ ದಾರಿದೀಪದಂತೆ ನಡೆಯಿಸಿಕೊಂಡು ಹೋಗುವುದೋ ಅದು ಸಂಸ್ಕೃತಿಯಾದೀತು” ಎನ್ನುತ್ತಾರೆ ಠ್ಯಾಗೋರ್(Tagore).

      `ಸಂಸ್ಕೃತಿ’(Culture)ಗೆ ಅದು ಸಾಧಿಸುವ ಭೌತಿಕ ಗುರಿಗಿಂತಲೂ ಅದು ಕ್ರಮಿಸುವ ದಾರಿ ಅತ್ಯಂತ ಮುಖ್ಯವಾದುದು. ಇದು ಪರಿಪೂರ್ಣತೆಯ ಲೆಕ್ಕಾಚಾರವಲ್ಲ. ಬದಲಾಗಿ ಅದು ಸಾಗುವ ದಾರಿಯಲ್ಲಿಯ ತಗ್ಗು-ದಿನ್ನೆಗಳನ್ನೂ ಗಮನಿಸುವುದು ಎಂದರ್ಥ. `ಸಂಸ್ಕೃತಿ’(Culture) ಹೊರಡಿಸುವ ಆನಂದದ ಕಿಡಿಗಳಷ್ಟೇ ಮುಖ್ಯ, ಅದರ ಮೌನದಿಂದ ಹೊರಡುವ ಮಾನಸಿಕ ಶಕ್ತಿ.

        ಇಂಥ ಸಂಸ್ಕೃತಿಯ ಗಡಿಗಳನ್ನು ಮೀರಿರುವುದೇ ಸಾಂಸ್ಕೃತಿಕ ರಾಜಕಾರಣ(Cultural Politics)ಕ್ಕೆ ಕಾರಣ. ಜೊತೆಗೆ ಸಾಹಿತ್ಯದ ಅರ್ಥ ಕಲುಷಿತಗೊಳ್ಳಲೂ ಕಾರಣ. ನೇರ ರಾಜಕಾರಣವಲ್ಲದ ಸಾಂಸ್ಕೃತಿಕ ರಾಜಕಾರಣ(Cultural Politics), ವೃತ್ತಿಪರ ರಾಜಕಾರಣಕ್ಕಿಂತಲೂ ಭಯಾನಕ ಮತ್ತು ಧೀರ್ಘ ಪರಿಣಾಮಗಳನ್ನು ಉಂಟು ಮಾಡುವಂತದ್ದು. ಸೃಜನಶೀಲತೆಯ ಅನೇಕ ದಾರಿಗಳಿಂದ ನಡೆಯುವ ಈ ಕ್ರಿಯೆ ಪ್ರಾಮಾಣಿಕ ಎಂದುಕೊಳ್ಳುವಷ್ಟು ಪ್ರಾಮಾಣಿಕವಲ್ಲ. ಕೆಲವು ಉದಾಹರಣೆಗಳು-
 ಇಸ್ಲಾಂ ಮೂಲಭೂತವಾದವನ್ನು ಯಾವಾಗಲೂ ವಿರೋಧಿಸುವ, ಖಂಡಿಸುವ ಎಂತಹ ಕಳಪೆ ಲೇಖಕನೂ ಯೂರೋಪಿನ ಸಾಂಸ್ಕೃತಿಕ ರಾಜಕಾರಣ(Cultural Politics)ದಿಂದಾಗಿ ಯೋಗ್ಯತೆಗೆ ಮೀರಿ ಎಲ್ಲಿಯೂ ಪುರಸ್ಕರಿಸಲ್ಪಡುತ್ತಾನೆ. ಇದು ಕನ್ನಡದ ಪಾಲಿಗೂ ಸತ್ಯ.
 
          ಜಗಜ್ಜಾಹಿರವಾದ ಇಸ್ಲಾಂ ಮೂಲಭೂತವಾದಿ ಘಟನೆಗಳತ್ತ ಒಂದರೆಕ್ಷಣವೂ ಆಲೋಚಿಸದ, ಸ್ವಕೀಯ ಅನುಭವಗಳ ಮೇಲೆ ನಿಂತು ಅದಕ್ಕೆ ಮುಖಾಮುಖಿಯಾಗಿಯೋ, ಅದರೊಂದಿಗೆ ಒಂದಾಗಿಯೋ ಎಂದೂ ಮಾತನಾಡದ, ಆದರೆ ತನ್ನ ಸುತ್ತಲಿನ ಎಲ್ಲ ಬಹುಸಂಖ್ಯಾತ ವಿಷಯಗಳ ಬಗ್ಗೆ ಬರೆಯುವ ಕನ್ನಡ ಮುಸ್ಲಿಂ ಲೇಖಕನೊಬ್ಬ `ಮಹಾನ್ ಪ್ರಜಾಪ್ರಭುತ್ವವಾದಿ’ ಎನಿಸಿಕೊಳ್ಳುತ್ತಾನೆ. ಕರ್ನಾಟಕದ ತುಂಗಭದ್ರೆಯನ್ನು ದಾಟಿ ಈಚೆ ಬಂದ ಮೇಲೆ ಕುವೆಂಪು(Kuvempu) ಸಾಹಿತ್ಯದ ಒಂದು ಸಾಲನ್ನೂ ಓದದ ಯಾರೂ ಕೂಡ ಅವರ ಪರವಾದ ವಕಾಲತ್ತನ್ನು ವಹಿಸಿಕೊಂಡು ಬಿಟ್ಟರೆ ಸಾಕು, ಆತ ಇಲ್ಲಿಯ ಬಹುಸಂಖ್ಯಾತ ಒಕ್ಕಲಿಗರ ಪ್ರೀತಿಗೆ ಭಾಜನನಾಗುತ್ತಾನೆ. ಉತ್ತರ ಕರ್ನಾಟಕದ ಯಾವುದೋ ಮೂಲೆಯಲ್ಲಿ ನಿಂತು, ವಚನದ ಒಂದು ಸಾಲನ್ನು, ಇಲ್ಲವೇ ಯಾವುದೋ ಮಠಾಧಿಶರ ಒಂದು ಉಕ್ತಿಯನ್ನು ಉದ್ಧರಿಸಿದರೂ ಸಾಕು, ಆತ ಶರಣಸಾಹಿತಿಯಾಗುತ್ತಾನೆ. ಬೇಂದ್ರೆ ಬರೆದಿದ್ದು `ನಾಲ್ಕುತಂತಿ’ಯೋ, ಐದುತಂತಿಯೋ ಎಂದೂ ಗೊತ್ತಿರದವನೂ `ಅವರದು ಮಾತಲ್ಲ, ಮಂತ್ರ ಎಂದೂ ಹೇಳಿದರೆ ಸಾಕು, ಪೂರ್ವದ ಪ್ರಾರಬ್ದಗಳನ್ನು ಕಳೆದುಕೊಂಡು, ವಿಪ್ರರ ಹೃದಯ ಕಮಲದಲ್ಲಿ ಸಾಕ್ಷಾತ್ ಬ್ರಹ್ಮನ ಅವತಾರವೇ ಆಗುತ್ತಾನೆ. ಕನ್ನಡ ಚಳುವಳಿಯ ನಾಲ್ಕು ದಶಕಗಳ ನಂತರ ಹುಟ್ಟಿಯೂ ಖದೀಮರು ಕನ್ನಡ ಕಣ್ಮಣಿಗಳಾಗುತ್ತಾರೆ. ಕನ್ನಡವನ್ನೇ ಉಸುರಿದವರು ಕಾಣದೇ ಹೋಗುತ್ತಾರೆ, ಮಾರಿದವರು ರಾಜಕಾರಣಿಗಳ ಒಡ್ದೋಲಗದ ಹೊಗಳು ಭಟ್ಟರಾಗಿ ನಿರಂತರವಾಗಿ ಅಧಿಕಾರಸ್ಥರಾಗಿರುತ್ತಾರೆ. ಹೇಳುತ್ತ ಹೋದರೆ ಇದು ಮುಗಿಯದ ಕರ್ಮಕಾಂಡ, ಅಕ್ಷರ ಬಲ್ಲವರಿಂದ ಬೌದ್ಧಿಕ ಮತ್ತು ಮಾನಸಿಕವಾಗಿ ನಡೆಯುವ ವ್ಯಭಿಚಾರ.

            ಇದು ಬರೀ ಸಾಹಿತ್ಯಕ್ಕಷ್ಟೇ ಸೀಮಿತಗೊಂಡ ರೋಗವಲ್ಲ. `ಸಾಂಸ್ಕೃತಿಕ ರಾಜಕಾರಣ’(Cultural Politics) ಪ್ರದರ್ಶನ ಕಲೆಗಳಾದ ಸಿನಿಮಾ, ನಾಟಕ, ಸಂಗೀತ ಗೋಷ್ಟಿ, ಇಷ್ಟಕ್ಕೂ ಸಾಲದೇ ಕ್ರಿಡಾಲೋಕಕ್ಕೂ ಹಬ್ಬಿಕೊಂಡ ವಿಚಿತ್ರ ಸಾಂಕ್ರಾಮಿಕ ರೋಗ. ಈ ಎಲ್ಲ ಲೋಕಗಳಲ್ಲಿ ಮಠಾಧೀಶರನ್ನೂ ನಾಚಿಸುವ ಪೀಠಗಳಿವೆ. ರಾಜಕಾರಣಿಗಳನ್ನೂ ಹಿಂದೆ ಹಾಕಬಲ್ಲ, ಲಾಭಿಗಳನ್ನು ಮಾಡುವ ಚಿಂತಕರ ಚಾವಡಿಗಳಿವೆ. ಗುಂಪುಗಳಿವೆ. ` ಇವನಾರವ ಎನ್ನದಿರು’ ಎನ್ನುವ ಸಂಸ್ಕೃತಿಯಲ್ಲಿಯೇ ಯಾರನ್ನು ಎಷ್ಟು, ಯಾತಕ್ಕಾಗಿ ಸಮೀಪವಿಟ್ಟುಕೊಳ್ಳಬೇಕು ಮತ್ತು ಸಂದರ್ಭಾನುಸಾರವಾಗಿ ತುಳಿದು ತೇಗಬೇಕು ಎನ್ನುವ ಕುಸಂಸ್ಕೃತಿಗಳಿವೆ. ನಿರ್ದಿಷ್ಟವಾಗಿ ಇಂತಹವರನ್ನು ಏರಿಸಿ, ಇಂಥವರ ತಿಥಿಯನ್ನು ಮಾಡಿಯೇ ತೀರಬೆಕೆನ್ನುವ ವೃತ್ತಿಪರ ವಿಮರ್ಶಕರ ಬೈಠಕ್‍ಗಳಿವೆ. ಇವರು ಸಂಘ- ಸಂಸ್ಥೆ, ಸರ್ಕಾರಗಳು ಕೊಟ್ಟ ಅವಕಾಶಗಳನ್ನು ಬಳಸಿಕೊಂಡು ಮೌಲ್ಯ ನಿರ್ಣಯಕ್ಕಿಂತಲೂ ಮೌಲ್ಯ ನಿರ್ನಾಮದ ಕೆಲಸವನ್ನು ಅವಿಶ್ರಾಂತವಾಗಿ, ಕಾಲಾತೀತವಾಗಿ ಮಾಡಿದ್ದಾರೆ.

           ವ್ಯಕ್ತಿಗತ ನೆಲೆಯಲ್ಲಿ ನಡೆಯುವ ಸಾಂಸ್ಕೃತಿಕ ರಾಜಕಾರಣಕ್ಕೆ ಮತ್ತು ಅದು ಉಂಟುಮಾಡುವ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದ ಸಾಲು-ಸಾಲು ಕೃತಿಗಳನ್ನು ಕನ್ನಡದಲ್ಲಿ ಉದಾಹರಿಸಬಹುದೇನೋ. ಬಡತನದ ಮೇಲೆ ಬೆಳಕು ಚೆಲ್ಲುತ್ತಲೇ ವ್ಯಕ್ತಿಗತ ನೆಲೆಯ ಲೇವಡಿ, ಕಿರಿಕಿರಿಗಳ ಮಧ್ಯ ಬೆಳೆದು ಬರುವ, ಲೇಖಕನೊಬ್ಬನ ಕಥೆ ಹೇಳುವ ಬಸವರಾಜ ಕಟ್ಟಿಮನಿ(Basavaraj Kattimani)ಯವರ `ಕಾದಂಬರಿಕಾರನ ಕಥೆ ’(Kadambarikarana Kathe), ಓರ್ವ ಜನಪ್ರೀಯ ಕಾದಂಬರಿಕಾರನಾಗಿ ಬೆಳೆದೂ ಬೆಳವಣಿಗೆಯ ಆರಂಭದ ದಿನಗಳಲ್ಲಿ ತನ್ನ ಜಾತಿ-ಬಾಂಧವರಿಂದಲೇ ಬಹಿಷ್ಕೃತನಾಗುವ ರೀತಿಯನ್ನು ನಿರೂಪಿಸುವ ಎಸ್. ಎಲ್. ಭೈರಪ್ಪ( S L Bhairappa) ನವರ `ಭಿತ್ತಿ’(Bhitti), ಸಾರಸ್ವತ ಲೋಕದ ಅತ್ಯಂತ ಇಂಟಲೆಕ್ಚುವಲ್(Intellectual), ಡೆಮಾಕ್ರಟಿಕ್  ಫೇಸ್ (Democratic Face) ಎನ್ನುವುದನ್ನು ಒಂದೆಡೆ ತೋರಿಸಿಕೊಳ್ಳುತ್ತಲೇ ಅದರ ಹಿಂದೆ ಸ್ವಾರ್ಥದ, ಸರ್ವಾಧಿಕಾರದ, ಸ್ವಜನ ಪಕ್ಷಪಾತದ ರಾಶಿ-ರಾಶಿ ಮುಖವಾಡ ಹೊತ್ತವರ ಸುತ್ತ ಬರೆಯಲ್ಪಟ್ಟ `ಇಗೋ ಅರಿವೆ’(Ego Arive), ಒಂದು ಸೀಮಿತ ಗುಂಪನ್ನು ಸ್ಥಾಪಿಸಲೆಂದೇ ಆರಂಭಗೊಂಡು, ಅರಿವಿನ ಹೆಬ್ಬಾಗಿಲನ್ನು ತೆರೆದುಕೊಂಡ `ದೇಶ-ಕಾಲ’( Desha-Kala) ತ್ರೈಮಾಸಿಕ ಕುರಿತು ಸಂಗ್ರಹಗೊಂಡ ಸಂಪಾದನಾ ಕೃತಿ `ದೇಶ ವಿದೇನಹಾ-ಕಾಲ ವಿದೇನಹಾ’ (Desha videnaha-Kala Videnaha)ಮತ್ತು ವಿಮರ್ಶೆ ಹೆಸರಿನಲ್ಲಿ ನಡೆದ ಸಾಹಿತ್ಯಿಕ ಅಧ್ವಾನಗಳನ್ನು ದಾಖಲಿಸುವ `ಶಬ್ದ ಸೂತಕದಿಂದ’(Shabda Sutakadinda), ಸಮಕಾಲೀನ ರಾಜಕಾರಣವನ್ನು ಚರ್ಚಿಸುತ್ತಲೇ ಅದು ಸಾಹಿತ್ಯ ಲೋಕದೊಂದಿಗೆ ಹೊಂದಿರುವ ನೈತಿಕ-ಅನೈತಿಕ ವಿವರಗಳನ್ನು ನೀಡುವ `ಚಂಪಾಕಾಲಂ’(Champa column), ನಮ್ಮ ಕನ್ನಡ ಸಂಸ್ಕ್ರತಿಯ ಸ್ವಾಭಿಮಾನದ ಸಂಕೇತಗಳಾಗಬೇಕಿದ್ದ ಅಕಾಡೆಮಿಗಳು ಮತ್ತು ವ್ಯಕ್ತಿಗಳು ದಾರಿ ತಪ್ಪುತ್ತಿರುವ ಬಗೆಯನ್ನು ವಿವರಿಸುವ ಲಕ್ಷ್ಮಣ ಕೊಡಸೆ(Lakshman Kodase)ಯವರ `ಲಕ್ಷಣ ರೇಖೆ’(Lakshmana Rekhe), ಹೀಗೆ ಈ ಚರ್ಚೆಗೆ ಹುಟ್ಟುಹಾಕಿರುವ ಅನೇಕ ಲೇಖಕರನ್ನು, ಕೃತಿಗಳನ್ನು, ಪತ್ರಿಕೆಗಳನ್ನು ನಾವು ಗಮನಿಸಬಹುದು. ಇವುಗಳೆಲ್ಲಾ ಒಂದೆಡೆ ಸಾಹಿತ್ಯದ ಪರಿಧಿಯಲ್ಲಿಯೇ ಹುಟ್ಟಿ, ಸಾಂಸ್ಕೃತಿಕ ರಾಜಕಾರಣ(Cultural Politics)ವನ್ನು ಚರ್ಚಿಸುವ ಮಹತ್ವದ ಧ್ವನಿಗಳಾಗುತ್ತವೆ.


Dr.Rajkumar
          ನಟ `ರಾಜಕುಮಾರರೆಂದರೆ ಕನ್ನಡ’( Dr. Rajkumar) ಎಂದು ಪದೇ ಪದೇ ಹೇಳಿ ತಾವೇ ರಾಜಕುಮಾರರೆಂದು ನಶೆಯೊಳಗೆ ಜೀಕುವ ಜೋಕುಮಾರರ ಗುಂಪು ಒಂದೆಡೆಯಾದರೆ, ಬ್ರಾಹ್ಮಣ ಸಾಹಿತಿ, ಕಲಾವಿದರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ಹೇಳಿ ಒಂದಿಷ್ಟು ಜಾತ್ಯಾತೀತವಾಗಿದ್ದ ಕಲಾ ಲೋಕವನ್ನು ಕುಲಗೇಡಿಸುವ ಚಟ ಚಕ್ರವರ್ತಿಗಳ ಗುಂಪನ್ನು ಮೆತ್ತೊಂದೆಡೆ ನಾವು ನೋಡುತ್ತೇವೆ. ನಿರ್ದಿಷ್ಟ ಶಾರೀರಿಕ, ಆರ್ಥಿಕ ಮತ್ತು ಜಾತಿರಾಜಕಾರಣದಿಂದಲೇ ಪ್ರಶಸ್ತಿಗಳನ್ನು, ಸ್ಥಾನಗಳನ್ನು ಒಂದೆಡೆ ಬಾಚಿಕೊಳ್ಳುವುದು ಮತ್ತು ಅವುಗಳನ್ನು ಸಾಂಸ್ಕೃತಿಕ ಸಾಧನೆ ಎಂದು ನಿರ್ದಿಷ್ಟ ಗುಂಪಿನಿಂದ ದಾಖಲಿಸಿ, ಸಾವಿಲ್ಲದ ಸುಳ್ಳುಗಳಿಂದ ಶತಶತಮಾನಗಳವರೆಗೆ ಯುವ ಮನಸ್ಸುಗಳು ಹಾಯ್ದುಹೋಗುವಂತೆ ನೋಡಿಕೊಳ್ಳುವುದು, ಎಲ್ಲವೂ ಸಾಂಸ್ಕೃತಿಕ ರಾಜಕಾರಣ(Cultural Politics)ದ ಹಲವು ಮುಖಗಳೇ.

             ಸಾಂಸ್ಕೃತಿಕವಾಗಿ ಮಹತ್ವದ್ದೆನಿಸಿಕೊಳ್ಳುವ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಪರಿಷತ್ತು ಪ್ರಾಧಿಕಾರ, ಆಕಾಡೆಮಿ, ವಿಶ್ವವಿದ್ಯಾಲಯಗಳ ಮಹತ್ವದ ಹುದ್ದೆಗಳು, ಪ್ರಶಸ್ತಿ- ಪುರಸ್ಕಾರಗಳು ಹಂಚಿಕೆಯಾಗುವ ಸಾಂಸ್ಕೃತಿಕ, ಪ್ರಾಮಾಣಿಕತೆಯ ಸಂದರ್ಭಗಳಲ್ಲಿ ಎಂಥ ರಾಜಕಾರಣ(Politics) ನಡೆಯುತ್ತದೆ? ವಿವೇಚನೆ, ಸಂಸ್ಕೃತಿ(Culture), ಸಾಮರಸ್ಯದಂಥ ವಿಚಾರಗಳಿಂದ ಸಾವಿರಗಾವುದ ದೂರ ಇರುವ ರಾಜಕಾರಣಿಗಳ ಅಣತಿಯಲ್ಲಿ ಎಷ್ಟೊಂದು ವಿಕೃತಿಯ ಪ್ರದರ್ಶನವಾಗುತ್ತದೆ? ನಮ್ಮ ಸಾಂಸ್ಕೃತಿಕ ಪ್ರತಿನಿಧಿಗಳು ಇಂಥವರನ್ನು ಹೇಗೆ ಓಲೈಸುತ್ತಾರೆ? ಎಂಬುದು ಇಂದು ಗುಟ್ಟಾಗಿ ಉಳಿದ ಸಂಗತಿಯೇನೂ ಅಲ್ಲ. ಸ್ವಾಭಿಮಾನದ ಗಂಧ-ಗಾಳಿ ಇಲ್ಲದವರು ಇಂದು ಸಾಂಸ್ಕೃತಿಕ ಪ್ರತಿನಿಧಿತ್ವದ ಸಂಕೇತವಾಗಿ ಚರ್ಚಿಸಲ್ಪಟ್ಟಿರುವುದು, ಜನಾಂಗದ ವಿವೇಕದ ಅವಸಾನದ ಸಂಕೇತ ಅಷ್ಟೇ. ಈ ಸಾಂಸ್ಕೃತಿಕ ರಾಜಕಾರಣದಲ್ಲಿ ವ್ಯಕ್ತಿಯ ಪ್ರತಿಭಾಶಕ್ತಿಗಿಂತ ಜಾತಿ, ಗುಂಪುಗಾರಿಕೆ, ಲಿಂಗ, ವಯಸ್ಸಿನ ಪ್ರಶ್ನೆಗಳು ಅದೆಷ್ಟೋ ಬಾರಿ ಪ್ರಮುಖವಾಗಿ ಅವುಗಳೇ ನಿರ್ಧಾರಾತ್ಮಕವಾಗಿರುವುದನ್ನು ಸಾಕು, ಸಾಕೆನ್ನಿಸುವಷ್ಟು ಕಂಡಿದ್ದೇವೆ. ಈ ವ್ಯಭಿಚಾರ ಇಂದು ಹೆಚ್ಚು ಕಡಿಮೆ ಸಮ್ಮತಗೊಂಡಿದೆ ಮತ್ತು ಸಾರ್ವತ್ರಿಕವಾಗಿದೆ.
 






Friday 12 July 2013

ಡಯಾನಾ(Dayana) ಎನ್ನುವ ಪದ ಸಾಕು ರೋಮಾಂಚನಕ್ಕೆ.......

Daina, the princess of vels
ಬಹುಶಃ ಜಗತ್ತಿನ ಯಾವ ಸಣ್ಣ ಪತ್ರಿಕೆಯೂ ಈಕೆಯ ಒಂದು ಸಣ್ಣ ವರದಿಯನ್ನಾದರೂ ಹಾಕದೇ ಹೋಗಿಲ್ಲ, ಈಕೆಯಷ್ಟು ಛಾಯಾಚಿತ್ರಗಳಿಗೆ ಮುಖಕೊಟ್ಟ ಮಹಿಳೆ ಕೂಡ ಇನ್ನೊಬ್ಬಳಿರಲಿಕ್ಕಿಲ್ಲ. ಕ್ಷಣದಲ್ಲಿಯೂ ಆಕೆ ಬಳಸಿದ ಒಂದು ಸಣ್ಣ ಕರ್ಚೀಫ್‍ನನ್ನೇನಾದರೂ ಹರಾಜಿಗಿಟ್ಟರೆ  ಅದನ್ನು ಲಕ್ಷಗಟ್ಟಲೆ ಕೊಟ್ಟು ಕೊಂಡುಕೊಳ್ಳುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಬದುಕಿನುದ್ದಕ್ಕೂ contervercy ಗಳೇ ತುಂಬಿ ತುಳುಕಾಡಿದರೂ, ಸತ್ತ ಮೇಲೂ ಅವುಗಳ ಸಂಖ್ಯೆ ಕಡಿಮೆಯಾಗಿಲ್ಲ. ಹೌದು ಅವಳೇ ಡಯಾನಾ  (Dayana), ಜಗತ್ತಿನ ತುಂಬಾ ಆಕೆಯ ಮೋಡಿಗೆ ಮರುಳಾದ ಜನರ ಮಹಾಪೂರವೇ ಇದೆ. ಬರೀ ಡಯಾನಾ ಎನ್ನುವ ಪದ ಸಾಕು ರೋಮಾಂಚನಕ್ಕೆ. ಅವಳೊಂದು ಸಾಯದ ನೆನಪು ಸೌಂದರ್ಯದೊಂದಿಗೆ ಜನ ಸೇವೆ, ತ್ಯಾಗ, ಸಾಮಾಜಿಕ ಚಟುವಟಿಕೆಗಳು ಅವಳ ವ್ಯಕ್ತಿತ್ವಕ್ಕೊಂದು ಹೊಳಪು.
ನಮಗೆಲ್ಲರಿಗೂ ಡಯಾನಾ (Dayana)ಒಬ್ಬ ಅಪ್ರತಿಮ ಸುಂದರಿಯಾಗಿ, ವೆಲ್ಸ್ ರಾಜಕುಮಾರಿಯಾಗಿ ದೊರೆ ಚಾಲ್ರ್ಸ್ ಮಡದಿಯಾಗಿ ಹಲವಾಗಿ ಅನೈತಿಕ ಸಂಬಂಧಗಳಿಂದ ಚರ್ಚೆಗೊಳಪಟ್ಟ ಹೆಣ್ಣಾಗಿ ಗೊತ್ತು. ಆದರೆ ಆಕೆಯ ಸಾಮಾಜಿಕ ಸೇವೆಗಳು, ಆಕೆಯ ಮಾನವೀಯ ಮರುಕ, ಸಂಕಷ್ಟಗಳಿಗೆ ಆಕೆ ಮರುಗುತ್ತಿದ್ದ ರೀತಿ, ಬಡವರಿಗೆ, ದೀನರಿಗೋಸ್ಕರ ಆಕೆ ತುಡಿಯುತ್ತಿದ್ದ ರೀತಿ ಅದೆಷ್ಟು ಜನರಿಗೆ ಗೊತ್ತು?
ಬಹಳ ಸಾರಿ ನಾವಾಕೆಯನ್ನು ಒಂದೇ ದೃಷ್ಟಿಕೋನದಿಂದ ನೋಡಿದ್ದೇವೆ. ಆದರೆ ಆಕೆಯ ಅಂತಃಕರಣದ ಯಾತ್ರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ.
ತನ್ನೊಳಗಿನ ಮಿಡಿತಗಳು ಅರಮನೆಯಲ್ಲಿ ಬಂಧಿಯಾಗಿ ಕೊಳೆಯುತ್ತಿರುವುದನ್ನು ಸಹಿಸಲಾಗದೇ ಆಕೆ ಅರಮನೆ, ಅಂತಸ್ತು, ರಾಜ ಹೀಗೆ ಎಲ್ಲರನ್ನು ತೊರೆದು ಬಂದು ಅಪ್ಪಿಕೊಂಡಿದ್ದು ನಿರ್ಗತಿಕರನ್ನು, ರೋಗಿಷ್ಟರನ್ನು. ಬರೀ ರಾಣಿಯಾಗಿ ಎರಡು ಮಕ್ಕಳ ತಾಯಿಯಾಗಿ, ಗೊಂಬೆಯಂತೆ ಸಿಂಗರಿಸಿಕೊಂಡು ಅತ್ತಿಂದಿತ್ತ ಓಡಾಡಿಕೊಂಡಿರುವಲ್ಲಿ ಅವಳಿಗ್ಯಾವ ತೊಂದರೆಯಿರಲಿಲ್ಲ. ಆದರೆ ಬದುಕನ್ನು ಸಾರಾ ಸಗಟಾಗಿ ತೊರೆದು ತನ್ನ ಬದುಕನ್ನು ತಾನೇ ಗಾಳಿಗೊಡ್ಡಿಕೊಳ್ಳುತ್ತಾಳೆ.
ಗಣಿಗಾರಿಕೆಯ ವಿರುದ್ಧ ಮೊದಲು ದನಿಯೆತ್ತಿದ್ದು ಡಯಾನಾ. ಆಂಗೋಲಾ ಗಣಿಗಾರಿಕೆಯಿಂದಾದ ವಿನಾಶಕಾರಿ ಬೆಳವಣಿಗೆಗಳ ವಿರುದ್ಧ ಮಾತಾಡಿ ಅದರಿಂದ ಹಾನಿಗೊಳಗಾದ ರೋಗಿಗಳ ಅನಾಥರ ರಕ್ಷಣೆಗಾಗಿ ನಿಂತವಳು ಅವಳು. ಜೂನ್ 12, 1997ರಲ್ಲಿ ಗಣಿಗಾರಿಕೆಯ ವಿರುದ್ಧ ಅವಳೊಂದು ಭಾಷಣ ಮಾಡಿದ್ದಾಳೆ, ಅದರ ವಿವರಣೆ ನಿಮಗಾಗಿ ಕನ್ನಡದಲ್ಲಿ.. .. .. ..
* ಆಧುನಿಕ ದುರಂತ ಮತ್ತು ಅದರ ಪ್ರತಿಫಲಗಳು - 12 ಜೂನ್ 1997ರಲ್ಲಿ ಗಣಿಗಾರಿಕೆಯನ್ನು ವಿರೋಧಿಸಿ ಡಯಾನಾಳ ಭಾಷಣ
ಮಹಿಳೆಯರೇ ಮತ್ತು ಸಭ್ಯಗೃಹಸ್ಥರೆ... ಮೈನ್ಸ್ ಅಡ್ವೈಸರಿ ಗ್ರೂಪ್ ಮತ್ತು ಲ್ಯಾಂಡ್ ಮೈನ್ಸ್ ಸರ್ವೈಯರ್ಸ್ ನೆಟ್‍ವರ್ಕ್    ಎರಡೂ ಸಂಘಟನೆಗಳಿಂದ ನಾನು ಎಷ್ಟೊಂದು ಹೃತ್ಪೂರ್ವಕವಾಗಿ ಸ್ವಾಗತಿಸಲ್ಪಟ್ಟಿದ್ದೇನೆ ಎನ್ನುವುದನ್ನು ತಿಳಿಸುತ್ತಲೇ ನಾನು ನನ್ನ ಉಪನ್ಯಾಸವನ್ನು ಪ್ರಾರಂಭಿಸಬೇಕು. ಇದು ಅತ್ಯಂತ ಆತ್ಮೀಯ ಭೆಟ್ಟಿ, ಯಾಕೆಂದರೆ ಪ್ರಪಂಚಕ್ಕೆ, ಇಲ್ಲಿ ಹಾಳಾಗುತ್ತಿರುವ ಜೀವನ, ಭೂಮಿ, ಅತ್ಯಂತ ಕಡುಬಡವರ ಪರಿಸ್ಥಿತಿಯ ಅರಿವು ಇಲ್ಲದೇ ಇರುವುದಕ್ಕಾಗಿ ಅದನ್ನು ತಿಳಿಸುವುದು ಅಲ್ಲದೆ, ಇಂದು ಮುಂಜಾನೆ ಅಂಗೋಲಾದ ನನ್ನ ಭೇಟಿಯವರೆಗೂನಿಮ್ಮನ್ನುದ್ದೇಶಿಸಿ ಮಾತನಾಡುವ ಕ್ಷಣದವರೆಗೂ, ಗಣಿಗಾರಿಕೆ ಕುರಿತ ನನ್ನ ತಿಳುವಳಿಕೆ ಅಷ್ಟಕ್ಕಷ್ಟೇ ಆಗಿತ್ತು.
ಗಣಿಗಾರಿಕೆ ಎನ್ನುವುದು ನಿಧಾನ ಮತ್ತು ನಿರಂತರ ಕೊಲೆ. ಇದರ ಹೋರಾಟ ಮುಗಿಯುತ್ತಲೇ ಇದಕ್ಕೆ ಬಲಿಯಾದ ಮುಗ್ಧರು, ಗಾಯಾಳುಗಳು ನಮಗೆ ಗೊತ್ತಿಲ್ಲದ ಯಾವುದೋ ರಾಷ್ಟ್ರದಲ್ಲಿ ಯಾವುದೇ ಧ್ವನಿಯಿಲ್ಲದೇ ಸತ್ತು ಹೋಗಿದ್ದಾರೆ. ದುರ್ದೈವದ ಅವರ ಒಂಟಿಧ್ವನಿ ಎಲ್ಲಿಯೂ ವರದಿಯಾಗುವುದಿಲ್ಲ. ಪೂರ್ವಾಗ್ರಹ ಪೀಡಿತವಾದ ಪ್ರಪಂಚ ಹೀಗೆ ಪ್ರತಿ ತಿಂಗಳು ಸಾಯುವ ಹೆಣ್ಣುಮಕ್ಕಳು ಮತ್ತು ಸಣ್ಣ ಮಕ್ಕಳ ಬಗ್ಗೆಯಾಗಲೀ, ಸಾಯದೇ ಅಂಗಹೀನರಾಗಿ ನರಳಾಡುವ 1200 ಜನರ ಬಗ್ಗೆಯಾಗಲೀ, ಒಂದಿಷ್ಟೂ ಆತಂಕಕ್ಕೊಳಗಾಗದೇ, ಇಂಥವರ ಸಾವಿಗೆ ಬೆಚ್ಚಿಬೀಳದೆ ಸಾಗಿ ಹೋಗುತ್ತದೆ. ಬ್ರಿಟನ್‍ದ e ಅಡಿoss ಸಂಸ್ಥೆಯೊಂದಿಗೆ ಜನವರಿಯಲ್ಲಿ ಅಂಗೋಲಾಕ್ಕೆ ನಾನು ಭೇಟಿ ಕೊಟ್ಟದ್ದು, ದೇಶದಲ್ಲಿ 15ಮಿಲಿಯನ್ ಗಣಿಕೇಂದ್ರಗಳಿದ್ದು, 10ಮಿಲಿಯನ್ ಜನತೆ ಕೆಲಸದಲ್ಲಿ ಪ್ರಪಂಚವನ್ನೇ ತಮ್ಮೆಡೆಗೆ ಗಮನಸೆಳೆಯುವ ಉದ್ದೇಶದಿಂದ ತೊಡಗಿಸಿಕೊಂಡಿದ್ದಾರೆ. ಆದರೆ ಇದು ಅನಾಹುತಕಾರಿಯಾಗಿದೆ.
ಕೆಲವು ಜನರು ನನ್ನ ಭೇಟಿಗೂ ರಾಜಕೀಯ ಬಣ್ಣ ಲೇಪಿಸಲು ಯತ್ನಿಸಿದ್ದಾರೆ. ಆದರೆ ನನ್ನದು ರಾಜಕೀಯ ಭೇಟಿಯಲ್ಲ ಮತ್ತು ನಾನು ರಾಜಕಾರಣಿಯೂ ಅಲ್ಲ. ಹಿಂದೆ ಹೇಳಿದಂತೆ, ಈಗಲೂ ಹೇಳುವಂತೆ ನನ್ನ ಕಾಳಜಿ ಮಾನವೀಯತೆಯದು. ಅಂತೆಯೇ ಮಾನವ ದುರಂತ ನನ್ನ ಗಮನವನ್ನು ಸೆಳೆದರೆ ಪ್ರಪಂಚದುದ್ದಕ್ಕೂ ಗಣಿಗಾರಿಕೆಯ ಪ್ರಕ್ರಿಯೆ ನಿಲ್ಲಬೇಕೆನ್ನುವುದೇ ನನ್ನ ಹೋರಾಟದ ಉದ್ದೇಶವಾಗಿದೆ. ಅಂಗೋಲಾದ ನನ್ನ ದಿನಗಳಲ್ಲಿ ಪ್ರಕ್ರಿಯೆಯ ಮೂರು ದುಷ್ಪರಿಣಾಮಗಳನ್ನು ನಾನು ನೋಡಿದ್ದೇನೆ-
1. ರುವಾಂಡಾದಲ್ಲಿಯ ಆಸ್ಪತ್ರೆಗಳು
2. ಹಣದ ವಿಪರೀತ ಶೇಖರಣೆ
3. ಆಂತರಿಕ ಕಲಹ.
ಗಣಿಗಾರಿಕೆಯಿಂದ ಬದುಕುಳಿದ ಕೆಲವು ದುರ್ದೈವಿಗಳನ್ನು ನಾನು ನೋಡಿದ್ದೇನೆ. ಗಾಯಾಳುಗಳನ್ನು ನಾನು ಕಂಡಿದ್ದೇನೆ. ಗಾಯಗಳನ್ನು ನನ್ನಿಂದ ವಿವರಿಸಲಾಗದು. ಯಾಕೆಂದರೆ ನನ್ನ ಅನುಭವದ ಪ್ರಕಾರ ಬಹಳಷ್ಟು ಜನರನ್ನು  ಅದು ಬಹುದೂರ ಒಯ್ಯುತ್ತದೆ. ಇಷ್ಟು ಮಾತ್ರ ಹೇಳಬಲ್ಲೆ, ಗಣಿಗಾರಿಕೆಯ ಕಾಲ್ತುಳಿತಕ್ಕೊಳಗಾದ ದೇಹಗಳನ್ನು, ಮಕ್ಕಳನ್ನು ನೀವು ನೋಡಿದಾಗ ಅವರು ಬದುಕುಳಿದ ರೀತಿಗೆ ನೀವು ಆಶ್ಚರ್ಯ ಪಡದೆ ಇರುವುದಕ್ಕಾಗುವುದಿಲ್ಲ. ಗಾಯಗಳ ಅತ್ಯಂತ ಕ್ರೂರ ಮುಖವೆಂದರೆ ಅವು ಅವರಿಗೆ ನೀಡಿದ ಯಾತನೆ ಮತ್ತು ವೈದ್ಯಕೀಯ ಅನಾನುಕೂಲತೆಗಳ ಅಧ್ವಾನ ಸ್ಥಿತಿ.
ಕೆಲವು ಆಸ್ಪತ್ರೆಗಳಲ್ಲಿ ಸ್ವತಃ ನಾನೇ ವೈದ್ಯಕೀಯ ಸಲಕರಣೆಗಳ ಪೂರೈಕೆಯಲ್ಲಿರುವ ತೊಂದರೆಯನ್ನು ಗಮನಿಸಿದ್ದೇನೆ. ಇಂಥಲ್ಲಿ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಔಷಧಿಗಳ ಕೊರತೆಯಾಗುತ್ತಿದೆ. ಅತ್ಯಂತ ಅವಶ್ಯವಾದ ಂಟಿಚಿesheiಛಿs ಮತ್ತು ನೋವು ನಿವಾರಕ ಮಾತ್ರೆಗಳ ಅಭಾವ ಕಂಡುಬರುತ್ತದೆ. ಗಾಯಗಳನ್ನು ಸುಧಾರಿಸುವ ಕಾರ್ಯದಲ್ಲಿ ತೊಡಗಿರುವ ವೈದ್ಯರಿಗೆ ನಿರೀಕ್ಷಿತ ಸಮಯದಲ್ಲಿ ಅವಶ್ಯಕ ಸೌಲಭ್ಯ ಸಿಗದೇ ಹೋಗುತ್ತವೆ. ಹೀಗಾಗಿ ಮನುಷ್ಯರು ಇಲ್ಲಿ ಅನುಭವಿಸುವ ಯಾತನೆ ನಮ್ಮ ಕಲ್ಪನೆಗೂ ನಿಲುಕದ್ದಾಗಿದೆ. ಇಷ್ಟೆಲ್ಲ ಮಾತನಾಡಿ ನಾನು ಕೇಳುತ್ತಿರುವುದು ಒಂದಿಷ್ಟು ಯೋಗ್ಯವೆನಿಸುವ ಬದುಕಿಗಾಗಿ ಬೇಕಾಗುವ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಯನ್ನು, ಯಾರು ಒಂದಿಷ್ಟು ಭೂಮಿ ಅಥವಾ ತಮ್ಮ ಕೈ ಅಥವಾ ಕಾಲು ಕಳೆದುಕೊಂಡಿರುವರೋ ಅದು ಅವರ ಜೀವನದುದ್ದಕ್ಕೂ ಯಾತನೆ ನೀಡುವ ಹಾನಿ.
ರೆಡ್‍ಕ್ರಾಸ್ ಸಂಸ್ಥೆ ದೇಹದ ಮುರಿದ ಭಾಗಗಳನ್ನು ಪುನರ್ ಜೋಡಿಸುವ ಮೂಲಕ ಮಾನವತೆಗೆ ತನ್ನ ಅದ್ಭುತ ಸೇವೆಯನ್ನಿಲ್ಲಿ ಸಲ್ಲಿಸಿದೆ. ಆದರೆ ದೇಹದ ಯಾವುದೋ ಒಂದು ಭಾಗವನ್ನು ನೈಜದಂತೆ ಸಿದ್ಧಪಡಿಸುವ ಶಕ್ತಿ ಅದಕ್ಕಿಲ್ಲ. ಉದಾಹರಣೆಗೆ ಒಂದು ಮಗು ಬೆಳೆದಂತೆ ಅನೇಕ ದೈಹಿಕ ಕ್ಷಮತೆಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಆದರೆ ಗಣಿಗಾರಿಕೆಗಳ ಗಾಯಗಳು ಅವನನ್ನು ಶಾಶ್ವತವಾಗಿ ಕ್ಷಮತೆಗಳಿಂದ ವಂಚಿತನನ್ನಾಗಿ ಮಾಡುತ್ತವೆ. ಅಂತೆಯೇ ನಾನು ಹೇಳುತ್ತಿರುವದು ಕಳೆದುಕೊಂಡ ಕಾಲುಗಳನ್ನೋ ಅಥವಾ ಕೈಗಳನ್ನೋ ಸಹಜವೆನ್ನಿಸುವಂತೆ ಮಾಡುವ ವಿಜ್ಞಾನವೊಂದು ಹುಟ್ಟಿಯೇ ಇಲ್ಲ.
ಆದರೆ ರೆಡ್‍ಕ್ರಾಸ್ ಸಂಸ್ಥೆ ಹೇಳಿರುವಂತೆ  ಗಣಿಗಾರಿಕೆಯಲ್ಲಿ ಅಳಿದುಳಿಯುವ ಪ್ರತಿಯೊಬ್ಬ ಗಾಯಾಳು, ಕಾರ್ಮಿಕ, ಪ್ರತಿ ತಿಂಗಳು 2-3 ಸಾವಿರ ರೂ. ವೆಚ್ಚ ಭರಿಸುವ ಗಾಯವೊಂದನ್ನು ಹೊತ್ತು ತಿರುಗುತ್ತಾನೆ ಎಂದು.
ಇಂಥ ಬಡ ರಾಷ್ಟ್ರದ ಬಡಕಾರ್ಮಿಕನೊಬ್ಬನಿಗೆ ಇದು ಅತ್ಯಂತ ದುಬಾರಿ ಹೊರೆ. ಇವು ಪ್ರಪಂಚದ ಎಲ್ಲ ರಾಷ್ಟ್ರಗಳು ತಕ್ಷಣ ಹೊರಳಿ ನೋಡಬೇಕಾದ ಒಂದು ತುರ್ತು. ಅಂಗೋಲಾದ ಪ್ರತೀ 334 ಸದಸ್ಯರಲ್ಲೊಬ್ಬ ಅಂಗಹೀನ ಸಿಗುತ್ತಾನೆ. ಅಂಗೋಲಾದಲ್ಲಿಯೇ ಪ್ರಪಂಚದ ಅತೀ ಹೆಚ್ಚು ಅಂಗವಿಕಲರು ಸಿಗುತ್ತಾರೆ. ಆದರೆ ಯುದ್ಧಾಯುಧಗಳನ್ನು ಜಗತ್ತಿಗೆ ಸರಬರಾಜು ಮಾಡಿ ಮೋಜು ನೋಡುವ ರಾಷ್ಟ್ರಗಳಿಗೆ ಒಂದು ಮಾನವೀಯ ಅಧಃಪತನದೆಡೆಗೆ ಲಕ್ಷ್ಯ ವಹಿಸಲು ಸಮಯವುಂಟೇ?
ನನ್ನ ಮೂರನೆಯ ಕಾಳಜಿ, ಭೂಮಿಯ ಮೇಲೆ ಶಾಶ್ವತವಾಗಿ ಗಣಿಗಾರಿಕೆ ನಿಲ್ಲಿಸುವ ಮಾರ್ಗವನ್ನು ಹುಡುಕುವದಾಗಿದೆHallow Trust ಪ್ರದೇಶಗಳಲ್ಲಿ  ಕೆಲವು ಸದಸ್ಯರೊಂದಿಗೆ ನಾನೊಂದು ಮುಂಜಾವನ್ನು ಕಳೆದೆ. ಅಲ್ಲಿ ಅತ್ಯಂತ ಅಪಾಯದ ಗಣಿಗಳಲ್ಲಿ ಕೆಲಸ ನಿರ್ವಹಿಸುವ ಕುರಿತು ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತದೆ ಮತ್ತು ಅವರ ಕಾರ್ಯವೈಖರಿಯ ಮೇಲೆ ನಿಗಾ ಇಡಲಾಗುತ್ತದೆ. ಎರಡೂ ಸಂಘಟನೆಗಳ ಸದಸ್ಯರನ್ನು ನಾನು ನಮ್ಮ ಟೀಮಿನ ಜನತೆ ಎಂದು ಸಂಬೋಧಿಸಿದ್ದೇನೆ. ಏಕೆಂದರೆ ಇಲ್ಲಿ ಇವರು ಕೆಲಸ ಮಾಡುತ್ತಿರುವುದು ಅವರ ಸಂಕಷ್ಟಗಳನ್ನು ಬಗೆಹರಿಸುವ ನಿಟ್ಟಿನಲ್ಲಿ. ನಮ್ಮೆಲ್ಲರ ಅನುಪಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಇವರಿಗೆ ನನ್ನ ಗೌರವ ಸಲ್ಲಿಸುತ್ತೇನೆ. ಏಕೆಂದರೆ ಅವರ ಸೇವೆ ಬರೀ ಗಣಿಗಾರಕೆಯ ಸುತ್ತಲಿನ ದುರಂತಗಳಿಗಷ್ಟೇ ಸೀಮಿತವಾಗಿಲ್ಲMines Advisory Groupಇಬ್ಬರು ಸದಸ್ಯರುಗಳಾದ Claris Howays ಮತ್ತು Hown Harthರು ಕಾಂಬೋಡಿಯಾದಲ್ಲಿ ಇತ್ತೀಚೆಗೆ ಅಪಹರಿಸಲ್ಪಟ್ಟರು. ಇವರುಗಳು ಸುರಕ್ಷಿತವಾಗಿ ಬಂದು ನಮ್ಮನ್ನು ಸೇರಲಿ ಎಂದಷ್ಟೇ ನಾವು ಪ್ರಾರ್ಥಿಸಬಹುದಾಗಿದೆ.
ಅಂಗೋಲಾದ ನೆಲದಲ್ಲಿ ಮನುಷ್ಯನ ವಿನಾಶಕ್ಕಾಗಿಯೇ ಎನ್ನುವ ಹಾಗೆ ಗಣಿಗಳ ವಿನ್ಯಾಸವಿದೆ. ಇಲ್ಲಿ ದುಡಿಯುವ ಜೀವಗಳು ನಿರಂತರವಾಗಿ ಸಂಕಷ್ಟದಲ್ಲಿವೆ. ಅಂಗೋಲಾದ ನನ್ನ ಭೇಟಿಯ ನಂತರ ಗಣಿಗಳನ್ನು ತೆಗೆದು ಹಾಕುವಲ್ಲಿ ಯಾವ ಮಾರ್ಗ ಸಾಧ್ಯವಿದೆ? ಎಂದೆಲ್ಲ ಯೋಚಿಸಿದ್ದೇನೆ. ಅತ್ಯಂತ ಕಳಪೆ ಮತ್ತು ಸೋವಿಯಾಗಿರುವ ಗಣಿಗಳನ್ನು ಪತ್ತೆ ಹಚ್ಚುವುದು ಅಥವಾ ನಾಶ ಪಡಿಸುವದು ಉತ್ಪಾದನೆಯ ನೂರುಪಟ್ಟು ದುಬಾರಿಯ ಕೆಲಸವಾಗಿದೆ.
ಅಂಗೋಲಾ ದೀರ್ಘ ಯುದ್ಧದ ನಂತರ ಮರಳಿ ಬಂದ ನಿರಾಶ್ರಿತರಿಂದ ತುಂಬಿದೆ. ಇದು ಸಮಾಜದ ದುರಂತದ ಇನ್ನೊಂದು ಮುಖ. ಇದು ಎಷ್ಟೋ ಜನರಿಗೆ ಇಲ್ಲಿ ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ನೆಲದಲ್ಲಿ ಏನು ನಡೆಯಿತೆಂಬುದರ ಅರಿವಿಲ್ಲ. ಅವನಿಗೆ ಗೊತ್ತಿರುವುದೊಂದೇ ಗಣಿಗಾರಿಕೆ. ಬದುಕಿನ ಸಾಮಾನ್ಯ ಹಕ್ಕುಗಳಿಗಾಗಿ ಹೋರಾಡುವ ಜನರಿಂದ ಗಣಿಗಾರಿಕೆಯ ಮೂಲ ಸೌಲಭ್ಯಗಳನ್ನು ಕೂಡ ಕಿತ್ತು ಹಾಕಿದೆ. ಹೀಗಾಗಿ ಉರುವಲು ಕಟ್ಟಿಗೆಯನ್ನು ಹುಡುಕಿ ತರುವಲ್ಲಿ ವಿಫಲವಾಗುವ ಹೆಂಡಂದಿರನ್ನು, ತಾಯಂದಿರನ್ನು, ಅಜ್ಜಿಯರನ್ನು ಹಿಡಿಯುವುದರಲ್ಲಿ ಅವರ ಬದುಕಿನ ನೆಮ್ಮದಿ ಹಾಳಾಗಿದೆ.
ಪ್ರಪಂಚದ ಅನೇಕ ಸಂಘಟನೆಗಳಿಂದ Mine Awareness ಕೆಲಸ ನಡೆದಿರುವುದು ನನಗೆ ಅತೀವ ಖುಷಿ ತಂದಿದೆ. ಈಗ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದಾದರೆ ವಯಸ್ಕರಿಗೆ ತಾವು ಏನು ಮಾಡಬೇಕು ಮತ್ತು ಏನು ಮಾಡಬಾರದೆನ್ನುವ ತಿಳುವಳಿಕೆ ನೀಡಿದ್ದಾದರೆ, ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಿಬಿಟ್ಟರೆ ಕೆಲವಷ್ಟಾದರೂ ಜೀವಗಳು ಉಳಿಯುತ್ತವೆ ಮತ್ತು ಗಾಯ ಕಡಿಮೆಯಾಗುತ್ತವೆ. ಪ್ರಪಂಚದುದ್ದಕ್ಕೂ ನಮ್ಮ ಸುತ್ತ 110 ಮಿಲಿಯನ್ ಗಣಿಗಾರಿಕೆ ಚಟುವಟಿಕೆಗಳು ನಡೆದಿವೆ ಎಂದು ನಾನು ಕೇಳಿದ್ದೇನೆ. ಅದರಲ್ಲಿ ಸರಾಸರಿ 75 ಪ್ರತಿಶತ ಆಫ್ರಿಕಾದಲ್ಲಿಯೇ ಕ್ರಿಯಾಶೀಲವಾಗಿವೆ. ಅದರಲ್ಲೂ ಅಂಗೋಲಾ ಒಂದರಲ್ಲಿಯೇ ಅತೀ ಹೆಚ್ಚಿನ  ಸಂಖ್ಯೆಯ ಗಣಿಕೇಂದ್ರಗಳಿವೆ. ಏಕೆಂದರೆ ಯುದ್ಧ ಎಷ್ಟೊಂದು ದೀರ್ಘಕಾಲದವರೆಗೆ ನಡೆದಿದೆ ಮತ್ತು ನೆಲವನ್ನೆಲ್ಲ ಆಕ್ರಮಿಸಿಕೊಂಡಿದೆ. ಹೀಗಾಗಿ ಇನ್ನೂ ಹೆಚ್ಚಿನ ದುರಂತ ಇಲ್ಲಿ ನಿರೀಕ್ಷಿತ.
ಕ್ಷಣದಲ್ಲಿಯೇ ಇದನ್ನು ನಾವು ನಿಲ್ಲಿಸಿದಾಗ್ಯೂ ಕೂಡ ಬರುವ ಅನೇಕ ದಿನಗಳವರೆಗೂ ಭೂಮಿಯ ಮೇಲಿನ ಅನೇಕ ಸಣ್ಣ ಪುಟ್ಟ ರಾಷ್ಟ್ರಗಳಿಗೆ ರೋಗ  ವ್ಯಾಪಿಸಿಕೊಂಡೇ ಇರುತ್ತದೆ - ಏಕೆಂದರೆ The Evil  that Men do lives after them”

ಅಂತೆಯೇ ನಾನಂದುಕೊಂಡಿದ್ದೇನೆ, ನಮ್ಮ ಹೆÀಗಲುಗಳ ಮೇಲೆ ಕೆಲವು ಜವಾಬ್ದಾರಿಗಳಿವೆ.
ಅಂಗೋಲಾಕ್ಕೆ ಭೇಟಿ ಕೊಡುವ ನನ್ನ ಹಲವು ಉದ್ದೇಶಗಳಲ್ಲಿ ಒಂದು ಮಾನವೀಯ ಕಾರ್ಯದಲ್ಲಿ ತೊಡಗಿರುವ e ಅಡಿoss ಸಂಸ್ಥೆಯನ್ನು ಸಮರ್ಥಿಸುವುದು ಮತ್ತು ಅಂತರ್‍ರಾಷ್ಟ್ರೀಯ ಒತ್ತಡ ಹೇರಿ ಗಣಿಗಾರಿಕೆಯನ್ನು ನಿಲ್ಲಿಸುವುದು. ಇದನ್ನೊಂದು ವೇಳೆ ನಾವು ಸ್ಥಾಪಿಸುವುದಾದರೆ ಮನುಷ್ಯತ್ವದಲ್ಲಿ ನಿಜಕ್ಕೂ ಒಂದಿಷ್ಟು ಪ್ರಗತಿಯನ್ನು ಕಂಡಂತೆ. ಮತ್ತು ಪ್ರಪಂಚದ ಕೆಲವು ಭಾಗದಲ್ಲಿಯಾದರೂ ಹೃದಯವಂತಿಕೆಯನ್ನು ಹೆಚ್ಚಿಸಿಕೊಂಡಂತೆ. ಒಂದು ವೇಳೆ ಅಂತಾರಾಷ್ಟ್ರೀಯ ಒತ್ತಡ, ಕೆಲಸ ಮಾಡಿ ಗಣಿಗಾರಿಕೆ ನಿಂತು ಹೋದರೆ ಈಗ ಅಸ್ತಿತ್ವದಲ್ಲಿರುವ ಮಾನವ ಜನಾಂಗದ ಮೊಮ್ಮಕ್ಕಾಳಾದರೂ ಭೂಮಿಯನ್ನು ವಾಸಿಸಲು ಯೋಗ್ಯ ಸ್ಥಳವೆಂದು ಘೋಷಿಸಲು ಸಾಧ್ಯವಾಗುತ್ತದೆ.
ಮುಂದುವರಿದ ರಾಷ್ಟ್ರಗಳಲ್ಲಿ ಮಾತ್ರ ತಲೆಮಾರಿಗೆ ವಿಶ್ರಾಂತಿಯೆನ್ನುವುದಿಲ್ಲ. ಏಕೆಂದರೆ ಗಣಿಗಾರಿಕೆ ಎಂಬ ಭೀಕರ ಅಪಘಾತದ ಗಾಯಗಳು ನಮ್ಮೊಂದಿಗಿವೆ ಹಾಗೂ ನಮ್ಮೊಂದಿಗೇ ಮುಂದುವರೆಯುತ್ತದೆ. ಗಣಿಗಳನ್ನು ಮುಚ್ಚುವ, ಕಂಡು ಹಿಡಿಯುವ ಕೆಲಸ ಅತ್ಯಂತ ನಿಧಾನವಾಗಿದೆ. ಇದನ್ನು ಇನ್ನಷ್ಟು ತೀವ್ರಗೊಳಿಸಲಾಗದೆ...? ಎನ್ನುವ ಪ್ರಶ್ನೆಗೆ ಸರಳ ಉತ್ತರವಿಲ್ಲ. ಏಕೆಂದರೆ ನಾವು ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದೇವೆ.

ಪ್ರಪಂಚ ಸುಂದರವಾಗಿರುವುದು ಆಫ್ರಿಕಾ ಮತ್ತು ಏಷಿಯಾಗಳಲ್ಲಿ, ಗಣಿಗಾರಿಕೆಗೆ ಬಲಿಯಾಗಿ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಕಾರ್ಯನಿರತವಾಗಿರುವವರು ಸ್ವಯಂ ಸೇವಾ ಸಂಘಟನೆಗಳಿಂದ ಖಂಡಿತವಾಗಿಯೂ ಪ್ರಗತಿ ಸಾಧ್ಯ. ಬರೀ ಸರ್ಕಾರಗಳಿಂದಲ್ಲ. ಆದರೆ ಇಂಥ ಕಾರ್ಯಗಳೂ, ಸಂಘಟನೆಗಳೂ ಗಣಿಗಾರಿಕೆಯ ಕರಾಳ ನೆರಳಿನಿಂದ ಮುಕ್ತವಾಗಿಲ್ಲ. ನಿರಾಶ್ರಿತರ ಪುನರ್‍ವಸತಿಯಂತೂ ಬಗೆಹರಿಯದ ಸಮಸ್ಯೆಯಾಗಿದೆ. ಒಳ್ಳೆಯ ಫಲವತ್ತಾದ ಭೂಮಿ ದುಸ್ಸಾಧ್ಯವಾಗಿದೆ. ಇದಕ್ಕಾಗಿ ಹೋರಾಡುವ ಸೇವಕರ ಬದುಕು ಗಂಡಾಂತರದಲ್ಲಿವೆ. ಇಂಥ ಸ್ಥಿತಿಯಲ್ಲಿರುವ ನಿನ್ನೆ ಮತ್ತು ಇಂದುಗಳ ಮಧ್ಯದ ಜನರನ್ನು ನಾವು ಪ್ರೀತಿಯಿಂದ ಕಾಣಬೇಕಿದೆ. ನಾನಂದುಕೊಳ್ಳುತ್ತೇನೆ, ಇದು ನಮ್ಮಿಂದ ಸಾಧ್ಯವಿದೆ. ಇದು ನಮಗೂ ಉಪಕಾರಿಯಾಗಿದೆ ಮತ್ತು ಅವರಿಗೂ ಕೂಡ. ಗಣಿಗಾರಿಕೆಯ ಪಿಡುಗನ್ನು ಭೂಮಿಯಿಂದ ಅಳಿಸಿಹಾಕುತ್ತಲೇ ಮನುಷ್ಯತ್ವದ ಸುಂದರವಾದ ಸೌಧ ನಮ್ಮಿಂದ ತನ್ನಷ್ಟಕ್ಕೆ ತಾನೇ ಅನಾವರಣಗೊಳ್ಳುತ್ತದೆ.