![]() |
ಕಿಮ್ ಡೆ ಜಂಗ್ |
ಜಂಗ್ನ ಪ್ರಗತಿಪರ ಆಲೋಚನೆಗಳ ಜಂಗ್(ಯುದ್ಧ)ನಲ್ಲಿ ಕಂಗಾಲಾದ ರಾಜಕೀಯ ವಿರೋಧಿಗಳು ಈತನನ್ನು 1954 ರಿಂದ 76 ರವರೆಗೆ 22 ವರ್ಷ ಬಂಧನದಲ್ಲಿಟ್ಟರು. 1978 ರಿಂದ 79ರವರೆಗೆ ಗೃಹ ಬಂಧನದಲ್ಲಿರಿಸಿದರು.
ಇಲ್ಲಿಯ ಈ ಅನುಭವಗಳನ್ನು ಕುರಿತು `ಪ್ರಿಜನ್ ರೈಟಿಂಗ್ಸ್’ ಎನ್ನುವ ಕೃತಿ ಬರೆದಿದ್ದಕ್ಕಾಗಿ 1989ರಲ್ಲಿ ಗಲ್ಲುಶಿಕ್ಷೆ ವಿಧಿಸಿದರು. ಆದರೆ ಭಿನ್ನವಾಗಿದ್ದ ದೈವದ ದಾರಿ ಉರುಳಿನ ಕೊರಳಿಗೆ ವಿಜಯದ ಮಾಲೆ ಹಾಕಿತು, ವಿಶ್ವದ ಶ್ರೇಷ್ಠ ಮಾನವೀಯ ಚಿಂತಕರಲ್ಲಿ ಒಬ್ಬನನ್ನಾಗಿಸಿತು. ನಿಲ್ಲದ ಈತನ ಲೇಖನಿ ‘ಮಾಸ್ ಪಾರ್ಟಿಸಿಪೇಟರಿ’, ‘ಪಿಸ್ಫುಲ್ ರಿಯುನಿಫಿಕೇಷನ್’ ಮತ್ತು ‘ಫಾರ್ ಎ ನ್ಯೂ ಬಿಗಿನಿಂಗ್’ ಕೃತಿಗಳನ್ನು ಬರೆಯುತ್ತಲೇ ಹೋಯಿತು. ಆತ್ಮಶಕ್ತಿಯ ಮುಂದೆ ಇದು ಸಾವೂ ಸೋಲುವ ಪರಿ!!
ನೇಣುಗಂಬದ ಮುಂದೆ ನಿಂತು, ಏಷಿಯಾದ ಸೌಂದರ್ಯವನ್ನು ಪ್ರಪಂಚಕ್ಕೆ ಸಾರಿ ಹೇಳುವ ಅವನ ಮಾತುಗಳನ್ನು ಕೇಳಿ, “ದಶಕಗಳ ಬದುಕನ್ನು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಕಳೆದಿದ್ದೇನೆ, ಪಾಶ್ಚಿಮಾತ್ಯ ಶೈಲಿಯ ಪ್ರಜಾಪ್ರಭುತ್ವ ಏಷಿಯಾಕ್ಕೆ ಹೊಂದುವುದಿಲ್ಲವೆಂದು ಕೇಳಿದ್ದೇನೆ. ಪಾಶ್ಚಾತ್ಯರ ಪ್ರಕಾರ ಅದಕ್ಕೆ ಏಷಿಯಾದಲ್ಲಿ ಬೇರುಗಳಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತಲೂ ನೂರಾರು ವರ್ಷಗಳ ಮುಂಚೆಯೇ ಏಷಿಯಾದಲ್ಲಿ ಜನರ ಬೌದ್ಧಿಕ ಮತ್ತು ಸಾಮಾಜಿಕ ಸ್ಥಿತಿಗಳಲ್ಲಿ ಮಾನವ ಘನತೆಯ ಅನೇಕ ವಿಚಾರಗಳನ್ನು ಸ್ಪಷ್ಟಪಡಿಸಲಾಗಿದೆ. ಉದಾಹರಣೆಗೆ“The
people are in heaven, the will of the people is the will of the heaven. Revere
the people as you would heaven.” ಎಂದು. ಚೈನಾದ ರಾಜಕೀಯ ವಿಚಾರದ ಕೇಂದ್ರ ಅಂಶವೇ ಇದು. ಇದು 3000 ವರ್ಷಗಳ ಹಿಂದಿನಿಂದ ಕೋರಿಯಾಕ್ಕೂ ಗೊತ್ತಿದೆ. 5000 ವರ್ಷಗಳಿಂದ ಭಾರತ ಇದನ್ನು ಅನುಸರಿಸಿಕೊಂಡು ಬಂದಿದೆ. ಇಲ್ಲಿ ಹುಟ್ಟಿದ ‘ಬೌದ್ಧಿಸಂ’ ಎಲ್ಲ ಕಾಲಕ್ಕೂ ಮಾನವ ಘನತೆ ಮತ್ತು ಹಕ್ಕುಗಳನ್ನು ಜಗತ್ತಿಗೆ ಸಂದೇಶವಾಗಿ ನೀಡಿದೆ.
ಇವುಗಳನ್ನು ಹೊರತುಪಡಿಸಿಯೂ ಇಲ್ಲಿಯೇ ಕೆಲವು ಸಂಸ್ಥೆಗಳೂ, ಸಿದ್ಧಾಂತಗಳು ಮನುಷ್ಯನನ್ನು ಯಾವಾಗಲೂ ಅತ್ಯಂತ ಗೌರವದಿಂದ ನೋಡುತ್ತ ಬಂದಿವೆ. ಕನ್ಪ್ಯೂಶಿಯಸ್ನ ವಿದ್ಯಾರ್ಥಿಯಾದ ಮೆನಷಿಯಸ್ ಬರೆಯುತ್ತಾನೆ, “The king is son of
heaven. Heaven sent him to serve the People with just rule. If he fails and
oppresses the people, the people have the right, on behalf of heaven, to
dispose of him.”ಇವುಗಳನ್ನು ಆಧರಿಸಿಯೇ ಎರಡು ಸಾವಿರ ವರ್ಷಗಳ ಮುಂಚೆ ಜಾನ್ಲಾಕ್ ತನ್ನThe
Theory of the Social Contract and Civic Sovereignty ಎನ್ನುವದನ್ನು ರೂಪಿಸಿದ. ಸ್ನೇಹಿತರೇ, ಪ್ರಜಾಪ್ರಭುತ್ವದ ತೊಟ್ಟಿಲು ಏಷಿಯಾ. ಇದಕ್ಕೆ ಯಾವುದೂ ಹೊಸತಲ್ಲ.
ಚೈನಾ ಮತ್ತು ಕೋರಿಯಾಗಳಲ್ಲಿ ಬಂಡವಾಳಶಾಹಿತನ ಮತ್ತು ಊಳಿಗಮಾನ್ಯವನ್ನು ಜೀಸಸ್ ಹುಟ್ಟುವ ಮುಂಚಿನಿಂದಲೂ ವಿರೋಧಿಸಲಾಗಿದೆ. ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಿವಿಲ್ ಸರ್ವೀಸ್ ಮುಖಾಂತರವೇ ಆಯ್ಕೆ ಮಾಡುವುದು ಸಾವಿರಾರು ವರ್ಷಗಳಷ್ಟು ಹಳೆಯ ವಿಷಯ. ರಾಜನ ಅಧಿಕಾರವನ್ನು ಕೂಡ Auditing System ಮೂಲಕವೇ ನಿಯಂತ್ರಿಸಲಾಗಿದೆ. ಪಶ್ಚಿಮವು ಡೆಮಾಕ್ರಸಿಗೆ ಒಂದು ಸಾಂಘಿಕ ಸ್ವರೂಪವನ್ನು ಕೊಡುವದರ ಮೂಲಕ ಭಿನ್ನವಾಗಿ, ಅದನ್ನೊಂದು ಸೌಹಾರ್ದದ, ಮಾನವ ಇತಿಹಾಸದ ಸಾರ್ವಕಾಲಿಕ ಪಥವನ್ನಾಗಿ ಮಾರ್ಪಡಿಸಿತಷ್ಟೇ.
ಏಷಿಯಾದಲ್ಲಿಯೇ ಹುಟ್ಟಿಕೊಂಡಿದ್ದ ಪ್ರಜಾತಂತ್ರವನ್ನು ವ್ಯವಸ್ಥಿತವಾಗಿ ಮತ್ತು ಪ್ರಶಂಶನೀಯವಾಗಿ ಅನುಸರಣೆಗೆ ತರುವ ಎಲ್ಲ ವ್ಯವಸ್ಥೆಯನ್ನು ಪಾಶ್ಚಾತ್ಯರು ಮಾಡಿಕೊಂಡರು. ಯಾವತ್ತೋ ಥೈಲ್ಯಾಂಡ್, ಇಂಡಿಯಾ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕ, ಇಂಡೋನೇಷಿಯಾ, ಫಿಲಿಪೈನ್ಸ್, ಜಪಾನ್ ಮತ್ತು ಕೋರಿಯಾಗಳಲ್ಲಿ ಪ್ರಜಾಸತ್ತೆ ಅಸ್ತಿತ್ವದಲ್ಲಿದೆ. ಪಾಶ್ಚಾತ್ಯರು ಹೇಳುವ ಹಾಗೆ ಪ್ರಜಾಸತ್ತೆ ಇಲ್ಲಿ ಸಾಧ್ಯವಿಲ್ಲ ಎನ್ನುವುದಾಗಿದ್ದರೆ ಇಷ್ಟೊಂದು ರಾಷ್ಟ್ರಗಳಲ್ಲಿ ಹೇಗೆ ಸಾಧ್ಯವಾಯಿತು? ಗೊತ್ತಿರಲಿ, ತೈಮೂರನ ದಾಳಿಗಳನ್ನು ಲೆಕ್ಕಿಸದೇ ಜನರು ಇಲ್ಲಿ ಮತ ಚಲಾಯಿಸಿದ್ದಾರೆ. ಮಯನ್ಮಾರದಲ್ಲಿ ಆಂಗ್ ಸಾನ್ ಸುಕೈಡಾ ಬಂಧನದಲಿದ್ದೂ ಡೆಮಾಕ್ರಸಿಗಾಗಿ ಬಡಿದಾಡುತ್ತಿದ್ದಾಳೆ. ನನಗೆ ವಿಶ್ವಾಸವಿದೆ ಪ್ರಜಾತಂತ್ರ ನಮ್ಮ ದೀಕ್ಷೆ.
ಕಿಮ್ ಡೆ ಜಂಗ್ನನ್ನು ಸಾವಿನ ಬಾಗಿಲಿಗೊಯ್ದು ನಿಲ್ಲಿಸಿದ ಕೃತಿ `ಪ್ರೀಜನ್ ರೈಟಿಂಗ್ಸ್’ .ಪ್ರತಿಯೊಬ್ಬ ಹೋರಾಟಗಾರನು ಓದಲೇಬೇಕಾದ ಕೃತಿ. ಅದು ಕಥೆಯಲ್ಲ, ಆತನ ಬದುಕು.
![]() |
ಕಿಮ್ ಡೆ ಜಂಗ್ |
ಈ ಸಾಲುಗಳನ್ನು ಗಮನಿಸಿ, “ನನ್ನ ವೈಯಕ್ತಿಕವಾದ ಕೆಲವು ವಿಚಾರಗಳನ್ನು, ಸಂಕಷ್ಟದ ನೆನಪುಗಳನ್ನು ವ್ಯಕ್ತಪಡಿಸಲು ಒಂದಿಷ್ಟು ಅವಕಾಶ ಕೊಡಿ. ಕ್ರೂರವಾದ ಸರ್ವಾಧಿಕಾರಿಗಳ ಕೈಯಲ್ಲಿ ಐದು ಬಾರಿ ಸಾವಿಗೆ ಮುಖಾಮುಖಿಯಾಗಿ ನಿಂತಿದ್ದೇನೆ. ಜೈಲುಗಳಲ್ಲಿ ಬದುಕಿನ ಆರು ವರ್ಷಗಳನ್ನು ಬಂಧಿಯಾಗಿ ಕಳೆದಿದ್ದೇನೆ. ನಲವತ್ತು ವರ್ಷಗಳವರೆಗೆ ನನನ್ನು ಗೃಹಬಂಧನದಲ್ಲಿ ಇಡಲಾಗಿದೆ. ಅನೇಕ ವರ್ಷ ಗಡಿಪಾರುಗೊಂಡಿದ್ದೇನೆ. ಆದಾಗ್ಯೂ ನಿಮ್ಮ ಬೆಂಬಲವಿgದೇ ಹೋಗಿದ್ದರೆ, ಈ ಹೋರಾಟ ಸಾಧ್ಯವಾಗುತ್ತಿರಲಿಲ್ಲ. ನಾನು ಶಕ್ತಿಯಾದದ್ದು ನಿಮ್ಮೆಲ್ಲರಿಂದ, ನನ್ನೊಳಗಿನ ಶಕ್ತಿಯ ಮೇಲಿನ ನಂಬಿಕೆಯಿಂದ.
ನಾನು ಬದುಕಿದ್ದೇನೆ, ಬದುಕುತ್ತೇನೆ, ದೇವರ ಕಾರುಣ್ಯ ನನ್ನೊಂದಿಗಿದೆ ಎಂದು ನಂಬುತ್ತೇನೆ. ಇದು ನನ್ನ ಅನುಭವದ ಮಾತಾಗಿದೆ. ಬಂಧುಗಳೇ, 1973ರ ಆಗಸ್ಟ್ನಲ್ಲಿ ಜಪಾನಿಗೆ ನಾನು ಗಡಿಪಾರುಗೊಂಡಾಗ, ಟೋಕಿಯೋದ ಹೋಟೆಲನಿಂದ ನನ್ನನ್ನು ಅಪಹರಿಸಲಾಯಿತು. Government of South Koriaದಿಂದ ನನ್ನನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ಸುದ್ಧಿ ಜಗತ್ತನ್ನು ಬೆಚ್ಚಿಬೀಳಿಸಿತು. ನನ್ನನ್ನು ಒಂದು ಬೋಟಿನಲ್ಲಿ ಸಮುದ್ರದ ಯಾವುದೋ ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು. ಕೈಗಳನ್ನು ಕಟ್ಟಿ, ಕಣ್ಣುಗಳಿಗೆ ಕಪ್ಪು ಬಟ್ಟೆ ಬಿಗಿದು, ಬಾಯಿಯನ್ನು ಮುಚ್ಚಿಸಲಾಯಿತು. ಇನ್ನೇನು ಅವರು ನನ್ನನ್ನು ಎತ್ತಿ ಸಮುದ್ರಕ್ಕೆ ಎಸೆಯಬೇಕು ಅಷ್ಟೆ, ಆಗ ನನ್ನೆದುರು ಬಂದು ನಿಂತವ ಜೀಸಸ್. ನಾನು ಆತನನ್ನು ಎಷ್ಟೊಂದು ಸ್ಪಷ್ಟವಾಗಿ ಕಂಡೆ. ಆತನ ಹೆಗಲಿಗೆ ಬಿದ್ದು ರಕ್ಷಣೆಗಾಗಿ ಗೋಗರೆದೆ. ಆ ಕ್ಷಣದಲ್ಲಿ ಆಕಾಶದಿಂದ ಬಂದ ಏರೋಪ್ಲೇನ್ವೊಂದು ನನ್ನನ್ನು ಹೊತ್ತೊಯ್ದು, ಸಾವಿನಿಂದ ರಕ್ಷಿಸಿತು.
ನನ್ನ ಇನ್ನೊಂದು ಮುಖ್ಯವಾದ ನಂಬಿಕೆ ಇತಿಹಾಸದ ನ್ಯಾಯಕ್ಕೆ ಸಂಬಂಧಿಸಿದ್ದು. 1980ರಲ್ಲಿ ಮಿಲಿಟರಿ ಸರಕಾರ ನನಗೆ ಮರಣದಂಡನೆಯನ್ನು ವಿಧಿಸಿತು. ಅದಕ್ಕೂ ಮುಂಚೆ ಆರು ತಿಂಗಳು ಜೈಲಿನಲ್ಲಿದ್ದೆ. ಪ್ರತಿದಿನವೂ ನಾನು ಸಾವಿನ ದಾರಿ ಕಾಯುತ್ತಿದ್ದೆ. ಅನೇಕ ದಿನ ರಾತ್ರಿಯಾದರೆ ಭಯಗೊಳ್ಳುತ್ತಿದ್ದೆ. ಸಾವು ನನ್ನನ್ನು ಸುತ್ತುವರಿಯುತ್ತಿತ್ತು. ಆದರೆ ನನಗೆಲ್ಲೊ ಭಯ ಆದಾಗ್ಯೂ ಅಂತಿಮವಾಗಿ ನ್ಯಾಯಕ್ಕೆ ಜಯ ಸಿಗುತ್ತದೆ ನಂಬಿಕೆ. ಇದನ್ನು ಇತಿಹಾಸದಲ್ಲಿ ಓದಿದ್ದೆ. ಹೀಗಾಗಿ ಆಗಲೂ ಈಗಲೂ ನಾನು ಇತಿಹಾಸದ ಪ್ರೇಮಿ, ಎಲ್ಲ ಕಾಲದಲ್ಲಿ, ಎಲ್ಲ ಸ್ಥಳಗಳಲ್ಲಿ ಯಾವ ವ್ಯಕ್ತಿ ಮಾನವತೆಗೆ ಮತ್ತು ಜನತೆಗೆ ತನ್ನ ಬದುಕನ್ನು ಧಾರೆ ಎರೆದು ಪ್ರಾಮಾಣಿಕನಾಗಿ ಬದುಕಿರುವನೋ, ಅಂತಹ ವ್ಯಕ್ತಿ ದೊಡ್ಡ ವಿಜಯವನ್ನು ಸಾಧಿಸಲಿಕ್ಕಿಲ್ಲ, ಜೀವನದಲ್ಲಿ ಒಂದಿಷ್ಟು ಎಡರು ತೊಡರುಗಳನ್ನೂ ಎದುರಿಸಬಹುದು, ಆದರೆ ಅಂತಿಮ ಜಯ ಅವನದೇ. ಇತಿಹಾಸದಲ್ಲಿ ಅವನಿಗೊಂದು ಗೌರವದ ಸ್ಥಾನ ಇದ್ದೇ ಇರುತ್ತದೆಂದು ನನ್ನ ಬಲವಾದ ನಂಬಿಕೆ. He who wins by
injustice may dominate the present day but History will always judge him to be
a shameful looser. Their can be no exception.