Tuesday 1 April 2014

ಇಸ್ಲಾಂ ಎಂಬುದು ಕುರುಡು ನಂಬಿಕೆಯಲ್ಲ: ಸಲ್ಮಾನ್ ಅಹಮದ್ ರಶ್ದಿ

" ಮಾರ್ಚ್ ೧೬, ೨೦೧೪ ರಂದು ‘ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಶುರುವಾದ ನನ್ನ ಹೊಸ ಅಂಕಣ ‘ ಕಾವ್ಯಕ್ಕೆ ಕೊರಳು’ ವಿನ ಮೊದಲ  ಲೇಖನ.

                
      

Satanic Verses
Salman Rashdi
1947 ಜೂನ್ 19ರಂದು ಬಾಂಬೆಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸಲ್ಮಾನ್ ಅಹಮದ್ ರಶ್ದಿ 1988 ರಲ್ಲಿ "Satanic Verses" ಎನ್ನುವ ಕೃತಿಯನ್ನು ಪ್ರಕಟಿಸುವುದರ ಮೂಲಕ ಭಾರತ ಹಾಗೂ ಯೂರೋಪಗಳಲ್ಲಿ ಮನೆಮಾತಾದ. ಆದರೆ ಈ ವಿವಾದಾತ್ಮಕ ಕೃತಿಯಿಂದಾಗಿ ಇರಾನ್‍ದ ಧಾರ್ಮಿಕ ಮುಖಂಡ ಹಾಗೂ ಪ್ರಪಂಚದ ಕೋಟ್ಯಂತರ ಮೂಲಭೂತವಾದಿ ಮುಸ್ಲಿಂರ ನಾಯಕನಾದ ಆಯೋತುಲ್ಹಾ ಖೊಮೇನಿಯ ಕೆಂಗಣ್ಣಿಗೂ ಗುರಿಯಾದ. ಪರಿಣಾಮ ರಶ್ದಿಯ ಶಿರಚ್ವೇದನದ ಘೋಷಣೆಯಾಯಿತು.
        1988ರಲ್ಲಿ ಬಂದ ಈ ಕಾದಂಬರಿಯಲ್ಲಿಯ ಮೊಹಮ್ಮದ್ ಎನ್ನುವ ಕಾಲ್ಪನಿಕ ಪಾತ್ರ ಮುಸ್ಲಿಂರ ಭಾವನೆಗಳನ್ನು ಕೆರಳಿಸಿ ಆತಂಕಕ್ಕೀಡು ಮಾಡಿದೆ. ಹಾಗೆ ನೋಡಿದರೆ ಇದು ಕಾದಂಬರಿಯ ನಾಯಕನನ್ನು ಕಾಡುವ ಕೆಲವು ಕನಸಿನೊಳಗೆ ಹುಟ್ಟುವ ಪಾತ್ರ. ಕಾದಂಬರಿಯ ಶೀರ್ಷಿಕೆಯೇ ಖುರಾನದ ಕೆಲವು ಸಾಲುಗಳನ್ನು ಸಂಕೇತಿಸುತ್ತದೆ. ಒಬ್ಬ ದೇವರಲ್ಲಿಯ ಮುಸ್ಲಿಂರ ನಂಬಿಕೆಯನ್ನು ಇಲ್ಲಿ ಲೇವಡಿ ಮಾಡಲಾಗಿದೆ ಎಂದು ಕೆಲವರ ವಾದ. ಬೇರೆಯೊಬ್ಬನ ಪ್ರೇಮಪಾಶಕ್ಕೆ ಬಿದ್ದ ತನ್ನ ಹೆಂಡತಿಯನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ಖುರಾನದ ಸಾಲುಗಳನ್ನು ಪದೇ ಪದೇ ಆ ವಂಚಕ ವ್ಯಕ್ತಿಯ ಮುಂದೆ ಹೇಳಿ ಆತನನ್ನು ಹುಚ್ಚನನ್ನಾಗಿ ಮಾಡುವುದೇ ಕಾದಂಬರಿ ಕುರಿತಾದ ಎಲ್ಲ ವಿವಾದಗಳಿಗೆ ಕಾರಣ.
 

    ಆದರೆ ಈ ಕಾರಣಕ್ಕಾಗಿ ಖೋಮೇನಿ ಸಾರಿದ ಮರಣದಂಡನೆ ಬರೀ ರಶ್ದಿ ಒಬ್ಬನಿಗೇ ಅನ್ವಯವಾಗಲಿಲ್ಲ. ಬದಲಾಗಿ ಆ ಪುಸ್ತಕ ಪ್ರಕಾಶಕರಿಗೂ, ಅಂಗಡಿಯಲ್ಲಿಟ್ಟು ಮಾರಾಟ ಮಾಡುವ ಅಂಗಡಿಕಾರನಿಗೂ, ಕೃತಿ ಕುರಿತು ಮಾತನಾಡುವವರಿಗೂ ವಿಸ್ತಾರವಾಯಿತು. ಭಯಗೊಂಡ ಮಾರಾಟಗಾರರು ಪುಸ್ತಕವನ್ನು ಅಂಗಡಿಯಿಂದ ಹೊರಹಾಕಿದರು. ಪುಸ್ತಕದಲ್ಲಿಯ ವಾದದ ಪರವಾಗಿದ್ದ ಇಬ್ಬರು ಓದುಗರನ್ನು ಲಂಡನ್‍ನಲ್ಲಿ ಹಾಡು ಹಗಲೇ ಕೊಲೆ ಮಾಡಲಾಯಿತು. ಪ್ರಪಂಚದುದ್ದಕ್ಕೂ "ಸೆಟಾನಿಕ್ ವರ್ಸಸ್" ಗೆ ಬೆಂಕಿ ಹಚ್ಚಲಾಯಿತು. ರಶ್ದಿಯ ಮೊದಲ ಸಂಸಾರಿಕ ಸಂಬಂಧ ಮುರಿದುಬಿದ್ದಿತು.
                                              ಖೊಮೇನಿಯ ನಂತರ ಬಂದ ಇರಾನ್‍ನ ನಾಯಕ ರಪ್ಸಂಜಾನಿಯೂ ರಶ್ದಿಯ ಮೇಲಿನ ಮರಣದಂಡನೆಯನ್ನು ಹಾಗೆಯೇ ಮುಂದುವರೆಸಿದ. ಭೂಮಿಯ ಮೇಲೆ ಖೋಮೇನಿಯ ಕೊನೆಯ ನಿಷ್ಠಾವಂತ ಅನುಚರರು ಇರುವವರೆಗೂ ರಶ್ದಿಗೆ ಪ್ರಾಣಾಪಾಯ ತಪ್ಪಿದ್ದಲ್ಲ. ಇವೆಲ್ಲವನ್ನು ಮೀರಿಯೂ ರಶ್ದಿ ಒಬ್ಬ ಶ್ರೇಷ್ಠ ಬರಹಗಾರ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
                                          ಇಂಥ ತನ್ನ ಕತ್ತಿಯಂಚಿನ ಬಾಳನ್ನು, ‘ಪತ್ವಾ’ ಎಂಬ ಕರಿ ನೆರಳಿನ ಕೆಳಗಿನ ಜೀವನವನ್ನು ಬಲೂನಿನಲ್ಲಿಯ ದಿನಗಳು ಎಂದಿದ್ದಾನೆ ಸಲ್ಮಾನ್ ರಶ್ದಿ. ತನ್ನ ಈ ಅಳಲನ್ನು, ಸಾವಿನೊಂದಿಗೆ ಮುಖಾಮುಖಿಯಾದ ಕ್ಷಣಗಳನ್ನು ವಿವರಿಸುತ್ತಾ 12 ಡಿಸೆಂಬರ್ 1991ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸಲ್ಮಾನ್ ಒಂದು ಮಹತ್ವದ ಭಾಷಣ ಮಾಡಿದ್ದಾನೆ. ಸತ್ಯದ ದೀವಟಿಗೆ ಹಿಡಿದುಕೊಂಡು ಸೃಜನಶೀಲತೆಗೆ ತೊಡಗಿಕೊಂಡ ಎಲ್ಲರೂ ಅವನ ಮಾತುಗಳನ್ನು ಆಲಿಸಲೇಬೇಕು.
                             “ಬದುಕಿನ ಎಂಥ ಗಂಡಾಂತರದ ಘಳಿಗೆಯಲ್ಲಿಯೂ ಭಯ ನನ್ನನ್ನು ಆಳಲು ನಾನು ಅನುಮತಿಸಿಲ್ಲ. ಸುಮಾರು 1000ಕ್ಕೂ ಹೆಚ್ಚಿನ ದಿನಗಳನ್ನು ನಾನು ಅತ್ಯಂತ ಕಷ್ಟದಿಂದ, ಹಿಂಸೆಯೊಂದಿಗೆ ಬದುಕಿದ್ದೇನೆ. ನನ್ನ ರಕ್ತಕ್ಕಾಗಿ ಇಂಗ್ಲಂಡ್‍ದ ಸಂಧಿಸಂಧಿಗಳಲ್ಲಿ ತಿರುಗಾಡಿದ ದಂಗೆಕೋರರು ನನಗೆ ಜೀವನ ಪಾಠ ಕಲಿಸಿದ ಮೊದಲ ಗುರುಗಳು. ಹೀಗೆ ಹೋಗುತ್ತಿರುವವರನ್ನು ಮೊದಲಿಗೆ ಕಂಡಾಗ ಅವರು ನನ್ನ ಹೃದಯವನ್ನು ಮೆಟ್ಟಿಕೊಂಡೇ ಹೋಗುತ್ತಿದ್ದಾರೆ ಎಂದು ಅನ್ನಿಸದೇ ಇರಲಿಲ್ಲ.ಪ್ರಪಂಚದ ಇತಿಹಾಸದಲ್ಲಿ ಖಂಡಿತ ಒಂದು ದಿನ ಬರುತ್ತದೆ. ಇಂದಿನ ಈ ಕೃತ್ಯಕ್ಕಾಗಿ ಅವರು ನಾಚಿಕೆ ಪಡಬೇಕಾಗುತ್ತದೆ. ಯಾವುದನ್ನು ಅಸಂಗತ ಎಂದು ಅವರು ಇಂದು ಪರಿಗಣಿಸಿರುವರೋ, ಅಂತಹ ರಶ್ದಿಯ ವಿವಾದವನ್ನು, ಹುತಾತ್ಮನೊಬ್ಬನ ಜೀವನ ದಹನದ ದಿನವೆಂದು ಯುರೋಪಿನ ತುಂಬ ಆಚರಿಸಲ್ಪಡುತ್ತದೆ ಎನ್ನುವುದನ್ನು ನೆನಪಿಡಬೇಕು.
ನಾನು ನನ್ನನ್ನೇ ಉಪಕರಿಸಿಕೊಳ್ಳಲು ನಿಸ್ಸಹಾಯಕನಾಗಿದ್ದೇನೆ ಎಂದು ಇಷ್ಟೇಕೆ ಕರಾರುವಕ್ಕಾಗಿ ಹೇಳುತ್ತಿರುವೆ ಎಂದು ನೀವು ಕೇಳಬಹುದು. 1990ರ ಕೊನೆಯಲ್ಲಿ ನೈತಿಕವಾಗಿ ಕುಸಿದು, ಆತ್ಮಸ್ಥೈರ್ಯ ಕಳೆದುಕೊಂಡು, ನನ್ನ ಬದುಕಿನ ಅತ್ಯಂತ ಧಾರುಣ ಸಂದರ್ಭವನ್ನು ನಾನು ಎದುರಿಸಿದ್ದೇನೆ. ಯಾವ ಸಂಸ್ಕøತಿ ಮತ್ತು ಸಮಾಜದಿಂದ ನಾನು ಸೃಜನಶೀಲ ಸ್ಫೂರ್ತಿ ಪಡೆದಿದ್ದೆನೊ ಅವುಗಳಿಂದಲೇ ನಾನು ಹಿಂಸೆಗೊಳಪಟ್ಟಿದ್ದೇನೆ. ಅವುಗಳಲ್ಲಿ ಮುಖ್ಯವಾಗಿ ಬ್ರಿಟಿಷ್, ಏಶಿಯನ್ ಹಾಗೂ ಭಾರತೀಯ ಮುಸ್ಲಿಂ ಸಮಾಜದಿಂದ. ನಾನು ನನ್ನ ಸ್ವಾಭಿಮಾನವನ್ನು  ಬಲಿಕೊಟ್ಟೂ ಇಸ್ಲಾಂದೊಂದಿಗೆ ಸೌಹಾರ್ದದೊಂದಿಗೆ ಇರಲು ಇಚ್ಛಿಸಿದ್ದೇನೆ. ಆದರೆ ನನ್ನ ಬರಹಗಳ ಮೂಲಕ ಬಹುತೇಕ ನಾನು ಏನನ್ನು ತೋರಿಸಲು ಇಚ್ಛಿಸಿದೆನೋ ಅದನ್ನೇ ನೋಡುವಲ್ಲಿ ಅವರು ವಿಫಲರಾಗಿದ್ದಾರೆ. ನನ್ನ ಅತ್ಯಂತ ಮುಖ್ಯವಾದ ಸಂವಾದ ನಡೆದದ್ದು ಈ ವೇಳೆಯಲ್ಲಿ ನನ್ನೊಂದಿಗೆ, ನನ್ನೊಂದಿಗೆ ಮಾತ್ರ.
ನನ್ನಷ್ಟಕ್ಕೇ ನಾನು ಹೇಳಿದೆ ‘ಸಲ್ಮಾನ, ನೀನು ಕಳುಹಿಸಬೇಕಾದ ಸಂದೇಶವನ್ನು ಎಷ್ಟೊಂದು ಗಟ್ಟಿಯಾಗಿ ಸಾರಬೇಕೆಂದರೆ ಪ್ರತಿಯೊಬ್ಬ ಸಾಮಾನ್ಯ ಮುಸ್ಲಿಂನು ನೀನು ಇಸ್ಲಾಂ ವಿರೋಧಿ ಅಲ್ಲ ಎಂದು ತಿಳಿಯುವಷ್ಟರ ಮಟ್ಟಿಗೆ ಮತ್ತು ಇಡೀ ಯೂರೋಪಿಗೆ, ಮುಸ್ಲಿಂ ಸಂಸ್ಕøತಿಯ ಒಳಾರ್ಥಗಳು ಸ್ಪಷ್ಟವಾಗುವಷ್ಟರ ಮಟ್ಟಿಗೆ. ಸಲ್ಮಾನ್, ನೀನು ಒಂದು ಮಾತನ್ನು ಒಪ್ಪಿಕೊಳ್ಳಬೇಕು. ಇಸ್ಲಾಂದ ಕಥೆ, ಅರ್ಥ ನಿನಗೆ ವೇದ್ಯವಾಗುವಷ್ಟು ಆಳವಾಗಿ ಇನ್ನಾರಿಗೂ ಸಾಧ್ಯವಿಲ್ಲ. ಇಸ್ಲಾಂ ನಿನಗೆ ಕೊಡುವ ಅರ್ಥಗಳನ್ನು ಮೀರಿದ ಅರ್ಥವನ್ನು ಪ್ರಪಂಚದ ಯಾವ ಶ್ರೇಷ್ಠ ಕಥಾನಕಗಳೂ ಕೊಡಲಾರವು. ಖಂಡಿತವಾಗಿಯೂ  "

Supernaturalism " ಆಗಲಿ, ಮೂಲಭೂತವಾದದ ವಿಚಾರಗಳಾಗಲಿ ನಿನಗೆ ಹೊಂದುವುದಿಲ್ಲ. ಆದರೆ ಇಸ್ಲಾಂ ಎಂಬುದು ಕುರುಡು ನಂಬಿಕೆಯಲ್ಲ. ಅದು ಅರ್ಥ. ಇದುವರೆಗೂ ನಿನ್ನ ಕುಟುಂಬಕ್ಕೆ ಯಾವ ಅರ್ಥವಾಗಿತ್ತೋ ಅದೇ ಅರ್ಥದ ಅರ್ಥ. ಅದು ಸಂಸ್ಕøತಿ. ಅದು ನಾಗರಿಕತೆ. ಅದೂ ನಿನ್ನ ಮುತ್ತಜ್ಜನಷ್ಟೇ ಮುಕ್ತ. ಅದು ನಿನ್ನ ತಂದೆಯಷ್ಟೇ ಆನಂದಿತ. ಯಾವುದೇ ಪಾಪಿಯೊಬ್ಬ ಮುಸ್ಲಿಂ ಪದವನ್ನು ಭಯಾನಕವೆಂದು ಬಿಂಬಿಸಲು ಅನುಮತಿಸಬೇಡ. ಯಾಕೆಂದರೆ ಇಸ್ಲಾಂ ಎನ್ನುವುದು ಕುಟುಂಬ.
                         ನಾನು ಮತ್ತೇ ಮತ್ತೇ ಹೇಳಿಕೊಂಡಿದ್ದೇನೆ. ಸಲ್ಮಾನ್, ಪ್ರಪಂಚದ ಒಬ್ಬ

Secular Christian, Secular Hindu ವಿನಂತೆ. ಒಬ್ಬ Secular Muslim ನ ನಿರ್ಮಾಣವಾಗಬೇಕಿದೆ. ಆದರೆ ಸಲ್ಮಾನ್, ಈ ನಿನ್ನ ವಾದವನ್ನು ವಾದದ ಚೌಕಟ್ಟಿನಿಂದ ಹೊರಗೆ ನಿಂತು ವಾದಿಸಿ ಅರ್ಥವಿಲ್ಲ. ಒಳಗಡೆ ಹೋಗು, ಕೋಣೆಯಲ್ಲಿ ನಿಲ್ಲು, ಮತ್ತು ನಿನ್ನ ಮಾನವೀಯ ಇತಿಹಾಸ ಪ್ರಜ್ಞೆಯ, ಪ್ರಜಾಸತ್ತಾತ್ಮಕ ತಳಹದಿಯ ಮುಸ್ಲಿಂತನಕ್ಕಾಗಿ ವಾದಿಸು.’
                 ಇಸ್ಲಾಂನ್ನು ನವೀಕರಿಸುವುದೇ ನನ್ನ ಪ್ರಾಮಾಣಿಕ ಉದ್ದೇಶವಾಗಿತ್ತು. ಇಂತಹ ವಿಚಾರಧಾರೆಯೊಂದಿಗೆಯೇ ನಾನು ಇದರ ಒಳಗಡೆ ಬಂದದ್ದು, ನನ್ನ ಹೋರಾಟವನ್ನು ಮುಂದುವರೆಸಿದ್ದು. ಆದರೆ ನನ್ನ ಈ ಹೋರಾಟಕ್ಕೆ ಅವಕಾಶ ಸಿಗಲೇ ಇಲ್ಲ. ನನ್ನೆದುರಾಳಿಗಳೆಲ್ಲ ನನ್ನನ್ನೇ ಮೌನವಾಗಿಸುವಲ್ಲಿ, ಶಿಕ್ಷಿಸುವಲ್ಲಿ, ನಿರತರಾದರು. ಯುರೋಪಿನಲ್ಲಿ ನನ್ನ ಕೆಲ ಸ್ನೇಹಿತರು ನನ್ನ ವಿರೋಧಿಗಳಾದರು. ನನ್ನ ವಿರುದ್ಧ ಅವಾಚ್ಯ ಪದಗಳನ್ನು ಬಳಸಲಾಯಿತು. ಈಗಾಗಲೇ ಅಸ್ತಿತ್ವದಲ್ಲಿರುವ ಹೃದಯಹೀನ ಅನಾಗರಿಕ, ಇಸ್ಲಾಂದ ವಿರುದ್ಧ ನನ್ನನ್ನು ನಿಲ್ಲಿಸಲಾಯಿತು. ಇಂದು ಮುಸ್ಲಿಂ ಸಮುದಾಯಗಳನ್ನು ಆಳುತ್ತಿರುವ ರಾಜಕೀಯ ಪ್ರೇರಿತ ಗುಂಪುಗಳಿಗೆ ನಾನು ವೈರಿಯೆಂದು ಬಿಂಬಿಸಲಾಯಿತು. ಪ್ರಪಂಚದ ಯಾವುದೇ ಸ್ಥಳದಲ್ಲಿ ಈಗ ಅಸ್ತಿತ್ವದಲ್ಲಿರುವ ಇಸ್ಲಾಂ ಒಂದು ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ವಿಫಲವಾಗಿದೆ. ಇವು ನಿಮ್ಮ ಅನುಕಂಪವನ್ನು ಗಿಟ್ಟಿಸಿಕೊಳ್ಳಲು ಹೇಳುವ ನನ್ನ ಸ್ವಾರ್ಥದ ಮಾತುಗಳಲ್ಲ. ಇಸ್ಲಾಂದೊಳಗಿನ ಕೆಲವು ಕಾರಣಗಳಿಗಾಗಿ ನಾನು ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಉದಾಹರಣೆಗೆ, ಮಹಿಳೆಯರ ಕುರಿತಾದ ಇಸ್ಲಾಂದ ಧೋರಣೆಗಳು.
                                ಪ್ರಗತಿಶೀಲವಾದ, ಭಯ ಮುಕ್ತವಾದ, ಸಂಸ್ಕøತಿಯನ್ನು ಪ್ರತಿಪಾದಿಸುವ, ವಾದಗಳನ್ನು ಸ್ವೀಕರಿಸುವ, ಸಹಜವಾದುದನ್ನು ಅರ್ಥೈಸಿಕೊಳ್ಳುವ ಮುಸ್ಲಿಂ ಸಂಸ್ಕøತಿಯನ್ನು ಸ್ಥಾಪಿಸುವುದು ನನ್ನ ಗುರಿಯಾಗಿಸಿಕೊಂಡಿದ್ದೇನೆ ಮತ್ತು ಅದನ್ನು ನಾನು ಧಾರ್ಮಿಕ ಸ್ವಾತಂತ್ರ್ಯ ಎಂದು ಪರಿಗಣಿಸಿದ್ದೇನೆ. ಇದಕ್ಕಾಗಿ ನಾನು ಹೋರಾಡುತ್ತೇನೆ ಎಂದು ಪದೇ ಪದೇ ಹೇಳುತ್ತೇನೆ. ಅಪರಾಧದ ಚಿತ್ರಣವನ್ನು ನೀಡುವ, ಅಜ್ಞಾನವನ್ನೇ ಅಸ್ತ್ರವನ್ನಾಗಿಸಿಕೊಂಡ ಪ್ರಸ್ತುತ ಇಸ್ಲಾಂ, ನನ್ನನ್ನೆಂದೂ ಆಕರ್ಷಿಸಲಾರದು ಅಥವಾ ನನ್ನ ವೈಚಾರಿಕತೆಗೆ ಭಂಗ ತರಲಾರದು.
ನಾನು ಹೀಗೇಕೆ ಬರೆದೆ ಎಂದು ಪಶ್ಚಾತ್ತಾಪ ಪಟ್ಟಿಲ್ಲ. ಬದಲಾಗಿ ಜನರ ಮನಸ್ಸನ್ನು ನೋಯಿಸಿದ್ದಕ್ಕಾಗಿ ನಾನು ಕ್ಷಮೆ ಕೇಳಿದ್ದೇನೆ. ಯಾಕೆಂದರೆ ಜನರ ಮನಸ್ಸನ್ನು ನೋಯಿಸುವುದಕ್ಕಾಗಿಯೇ ನಾನು ಕೃತಿ ರಚಿಸಲು ಹೊರಡಲಿಲ್ಲ. ಆದರೆ ಅದು ಜರುಗಿತಷ್ಟೇ. ಸಾಮಾನ್ಯವಾಗಿ ಲೇಖಕನೊಬ್ಬ ತನ್ನ ಕೃತಿಯಲ್ಲಿಯ ಪಾತ್ರಗಳು ಮಾತನಾಡಿದ ವಿಚಾರಗಳೊಂದಿಗೆ ಆನಂತರ ಸಾರ್ವಜನಿಕರ ಮುಂದೆ ಜವಾಬ್ದಾರನಾಗುವುದಿಲ್ಲ. ಪುಸ್ತಕ ಜಗತ್ತಿನಲ್ಲಿ ಸತ್ಯವಾಗಿರುವುದು ಆನಂತರ ವಾಸ್ತವದಲ್ಲಿ ಅಸತ್ಯ ಎಂದು ಬಹುಪಾಲು ಲೇಖಕರು ವಾದಿಸುವದೂ ಉಂಟು.
               ನಮ್ಮ ಜೀವನಗಳು ನಾವು ಯಾರು ಎಂಬುದನ್ನು ಕಲಿಸುತ್ತವೆ. ನಾನು ಒಂದು ವಾಸ್ತವವನ್ನು ಅರಿತಿದ್ದೇನೆ. ಯಾವಾಗ ನೀವು ಇನ್ನೊಬ್ಬರ ಬದುಕಿನ ಕಟುವಾಸ್ತವಗಳನ್ನು ನಿಮ್ಮವು ಎಂದು ತಿಳಿದುಕೊಳ್ಳುತೀರೋ ಅಥವಾ ನಿಮ್ಮಂಥವು ಎಂದು ತಿಳಿದುಕೊಳ್ಳಲು ಯತ್ನಿಸುತ್ತೀರೋ ಆಗ ನೀವು ಸತ್ತಂತೆ. ಹೀಗೆ ನನ್ನ ಮನಸ್ಸಿನ ವಿರುದ್ಧವಾಗಿ ಅನೇಕ ವಾಸ್ತವ ಚಿತ್ರಣಗಳನ್ನು ನನ್ನ ಮೇಲೆ ನಿರಂತರವಾಗಿ ಸುರಿಯಲಾಗಿದೆ. - ಭದ್ರತಾ ಸಲಹೆಗಾರರು, ಸರಕಾರಗಳು, ಪತ್ರಕರ್ತರು, ಆರ್ಚ ಬಿಷಪ್‍ಗಳು, ಸ್ನೇಹಿತರು, ವೈರಿಗಳು, ಮುಲ್ಲಾಗಳು ಇನ್ನೂ ಅನೇಕರು - ಇಂತಹವರು ಬದುಕಿನ ಕುರಿತು ಮಾತಾಡಿದಾಗ ಅದು ಸಾಮಾನ್ಯವಾಗಿ ಕಟ್ಟುಪಾಡುಗಳಿಂದ ತುಂಬಿರುವದು, ನಿಶ್ಚಿತವಾಗಿರುವುದು, ವೈರುದÀ್ಯಗಳಿಂದ ಕೂಡಿರುವವು ಆಗಿರುತ್ತವೆ. ನಾನು ಕಂಡುಕೊಂಡ ಬದುಕಾಗಿರುವುದಾದರೆ ಅಥವಾ ನನ್ನ ಅನುಭವದ ಮೀಸೆಯಿಂದ ನೋಡುವ ಪ್ರಪಂಚವಾಗಿದ್ದರೆ ಅದು ಅನಿಶ್ಚಿತವಾದದ್ದು, ಮತ್ತು ಪ್ರತಿಕ್ಷಣವೂ ರೂಪಾಂತರಕ್ಕೆ ಸಾಧ್ಯವಾದುದಾಗಿರಬಹುದು. ಆಗಿರಲು ಸಾಧ್ಯವಿದೆ. ಅದು ಎಂಥದೋ ಆಗಿರಲಿ. ನಾನು, ನನ್ನ ಆತ್ಮದ ನಾದವನ್ನೇ ಕೇಳಬೇಕಲ್ಲವೇ? ಅದರ ತಪ್ಪುಗಳಿಗೆ ಬಾಧ್ಯಸ್ಥನು ಆಗಬೇಕಲ್ಲವೇ? ಬಿರುಗಾಳಿಯೆಷ್ಟೇ ಭಯಂಕರವಾಗಿರಲಿ, ಹುಚ್ಚನಂತಾದರೂ ಪರವಾಗಿಲ್ಲ ಅದನ್ನು ಎದುರಿಸುವುದರಲ್ಲಿಯೇ ಬದುಕಿನ ಸಾಥ್ರ್ಯಕ್ಯವಿದೆ. ಅದು ನನ್ನನ್ನು ಎಷ್ಟೊಂದು ದ್ವಂದ್ವಗಳ ಮಧ್ಯೆ  ನೂಕಿಸುವುದಾದರೆ, ವೈರುದ್ಯಗಳ ಮಧ್ಯೆ ಸಿಲುಕಿಸುವುದಾದರೆ ಸಿಲುಕಿಸಲಿ ಬಿಡಿ. ಯಾಕೆಂದರೆ ಇಂತಹ ಸಂಕಷ್ಟದ ಬದುಕಿನ ಸಾಗರದಲ್ಲಿಯೇ ನಾನು ಬದುಕಿದ್ದು ಮತ್ತು ನನ್ನ ಬರಹಕ್ಕಾಗಿ ಈ ಸಾಗರದಲ್ಲಿಯೇ ನಾನು ಮೀನು ಹಿಡಿಯಲು ಹೊರಟದ್ದು. ಬಾಂಬೆಯ ನನ್ನ ಬೆಡ್‍ರೂಮಿನ ಆಚೆ ಇಣುಕಿ ನೋಡಿದರೆ ಇದೊಂದು ಭಯಂಕರ ಪ್ರವಾಹದ ಸಮುದ್ರ. ಈ ಸಮುದ್ರದ ಮೊರೆತಗಳನ್ನು ಕೇಳುತ್ತಲೇ ನಾನು ಹುಟ್ಟಿದ್ದೇನೆ ಮತ್ತು ಅದನ್ನು ಹೊತ್ತುಕೊಂಡೇ ಈ ಪ್ರಪಂಚವನ್ನು ಸುತ್ತಾಡಿದ್ದೇನೆ.
                   “ಮುಕ್ತ ಮಾತು ಎನ್ನುವುದು ಯಾವುದರ ಆರಂಭವೂ ಅಲ್ಲ” ಎಂದು ನನ್ನ ಇಸ್ಲಾಂಮಿಕ ತೀವ್ರವಾದಿ ಗೆಳೆಯರ ವಾದ. ಆದರೆ ಇದು ಹಾಗಲ್ಲ ಸಾರ್. ಮುಕ್ತ ಚರ್ಚೆಯೆನ್ನುವುದೇ ಎಲ್ಲವು. ಅದುವೇ ನಿಜವಾದ ಆಟ ಮತ್ತು ಅದು ಮತ್ತೇನು ಅಲ್ಲ, ಬದುಕೇ.
                                     ಮತ್ತೆ ನನ್ನ ಪ್ರಶ್ನೆ ಅದೇ. ನನ್ನಂಥವನೊಬ್ಬನ ಬದುಕಿನ ಮೌಲ್ಯ ಏನು?
              ಪ್ರಪಂಚದ ಯಾವುದೇ ರಾಜಕೀಯ ಸಂಧಾನ, ಮಾತುಕತೆಗಳಿಗಿಂತಲೂ ಇದು ನಗಣ್ಯವಾದುದ್ದೆ? ಇದೇ ಏಪ್ರಿಲ್ 1991ರಲ್ಲಿ ಬುರ್ಖಾ ಹಾಕಿಕೊಳ್ಳದೇ ತಿರುಗಾಡಿದ 800 ಮಹಿಳೆಯರಿಗೆ 74 ಛಡಿ ಏಟುಗಳನ್ನು ಕೊಟ್ಟಿರಲ್ಲ, ಅವರಲ್ಲಿ 80 ವರ್ಷದ ಹಿರಿಯ ಲೇಖಕಿ, ಒಚಿಡಿiಚಿಟಿ ಈiಡಿoz ಅವರೂ ಇದ್ದರಲ್ಲ, ಹಾಗೂ ಇಂದಿಗೂ ಜೈಲಿನಲ್ಲಿದ್ದುಕೊಂಡೇ ಇವುಗಳ ವಿರುದ್ಧ ಧ್ವನಿ ಅವರು ಎತ್ತುತ್ತಿದ್ದಾರಲ್ಲ ಇಂತಹವರ ಹೋರಾಟದ ಮುಂದೆ ನನ್ನಂಥವನ ಬದುಕಿಗೆ ಯಾವ ಅರ್ಥ? ಇರಾನದ ವಿದೇಶಾಂಗ ಸಚಿವ ಹೇಳುತ್ತಾರೆ; ನಮ್ಮ ದೇಶದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಅಥವಾ ಇದು ಒತ್ತಾಯಪೂರ್ವಕವಾಗಿ ಹೇಳಿಸಲ್ಪಟ್ಟಿದೆ.
            ಸ್ನೇಹಿತರೇ, ಒಬ್ಬ ಗೆಳೆಯ, ಗೆಳೆಯನಿಗೆ ಎಷ್ಟು ಮಹತ್ವದವ? ಒಬ್ಬ ಮಗ ತಾಯಿಗೆ ಎಷ್ಟು ಮಹತ್ವದವ? ಅಥವಾ ಒಬ್ಬ ತಂದೆ ಮಗನಿಗೆ ಎಷ್ಟು ಪ್ರೀತಿಯವ? ಎನ್ನುವುದನ್ನು ಈಗ ನೀವು ನಿರ್ಧರಿಸಬೇಕು. ಮನುಷ್ಯನ ಪ್ರಜ್ಞೆ, ಹೃದಯ ಮತ್ತು ಆತ್ಮಗಳೆಂದರೆ ಏನು? ಎಂದು, ಅವುಗಳ ಬೆಲೆ ಏನು? ಎಂಬುದನ್ನು ನೀವು ನಿರ್ಧರಿಸಬೇಕು. ಒಬ್ಬ ಲೇಖಕನ ಪ್ರಾಮುಖ್ಯತೆ ಈ ಸಂದರ್ಭದಲ್ಲಿ ಏನು? ಎಂಬುದನ್ನು ನೀವು ಈ ಪ್ರಪಂಚಕ್ಕೆ ತಿಳಿಹೇಳಬೇಕು. ಒಬ್ಬ ಕಥೆ ಹೇಳುವವನಿಗೂ, ಆ ಮೂಲಕ ಆತ ಈ ಪ್ರಪಂಚದೊಂದಿಗೆ ನಿರಂತರ ಸಂಘರ್ಷಿಸುವದಕ್ಕೂ ಯಾವ ಸ್ಥಾನ ಎಂಬುದನ್ನು ನೀವೇ ನಿಶ್ಚಿತಪಡಿಸಬೇಕು.”

No comments:

Post a Comment